ಮುಖ್ಯಮಂತ್ರಿ ಅಭಿನಂದನಾರ್ಹ: ಶರವಣ

7
ಆರ್ಯವೈಶ್ಯ ಅಭಿವೃದ್ದಿ ನಿಗಮ ಸ್ಥಾಪನೆ, ₹ 10 ಕೋಟಿ ಅನುದಾನ

ಮುಖ್ಯಮಂತ್ರಿ ಅಭಿನಂದನಾರ್ಹ: ಶರವಣ

Published:
Updated:
Deccan Herald

ಮಾಗಡಿ: ಆರ್ಯವೈಶ್ಯ ಅಭಿವೃದ್ದಿ ನಿಗಮ ಸ್ಥಾಪಿಸಿ ಅದಕ್ಕೆ ₹ 10 ಕೋಟಿ ಅನುದಾನ ನೀಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಅಭಿನಂದಿಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ತಿಳಿಸಿದರು.

ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ನೂತನ ಅಧ್ಯಕ್ಷ ಶಬರೀಶ್‌ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಇಲ್ಲಿಯವರೆಗೆ ಆರ್ಯವೈಶ್ಯರನ್ನು ರಾಜಕೀಯವಾಗಿ ಯಾರೂ ಗುರುತಿಸಿರಲಿಲ್ಲ. ನಮ್ಮ ಸಮುದಾಯದ ಯುವಜನರು ಸಂಘಟಿತರಾಗಿ ರಾಜಕೀಯದಲ್ಲಿ ಗುರುತಿಸಿಕೊಂಡು ಸಮಾಜದಲ್ಲಿ ಇರುವ ಬಡವರ ಸಹಾಯಕ್ಕೆ ಮುಂದಾಗಬೇಕು’ ಎಂದರು.

‘ಯೋಜನಾ ಪ್ರಾಧಿಕಾರದಿಂದ ಆರ್ಯವೈಶ್ಯರ ರುದ್ರಭೂಮಿ ಅಭಿವೃದ್ದಿಗೆ ₹ 25 ಲಕ್ಷ ನೀಡುತ್ತೇವೆ. ವರ್ತಕ ಸಮುದಾಯದ ಯುವಕರಿಗೆ ರಾಜಕೀಯ ಸ್ಥಾನಮಾನ ನೀಡುತ್ತೇವೆ’ ಎಂದು ಶಾಸಕ ಎ.ಮಂಜುನಾಥ ಭರವಸೆ ನೀಡಿದರು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಸ್‌.ಜಿ.ರಮೇಶ್‌ ಗುಪ್ತ, ಕಾರ್ಯದರ್ಶಿ ಎಸ್‌. ನಾಗರಾಜ ಶೆಟ್ಟಿ, ಯುವಜನ ಸಭಾದ ನಿಕಟಪೂರ್ವ ಅಧ್ಯಕ್ಷ ಜಿ.ಬಿ. ಕೋಟೇಶ್ವರ, ವಾಸವಿ ಯುವಜನ ಸಂಘದ ಅಧ್ಯಕ್ಷ ಬಿ.ಎಂ. ಸ್ವರೂಪ್‌, ಕಾರ್ಯದರ್ಶಿ ರಜತ್‌, ಸಂಘಟನಾ ಕಾರ್ಯದರ್ಶಿ ಬಾಲಾಜಿ, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ನರ್ಮದಾ ಮಹೇಶ್‌, ಕಾರ್ಯದರ್ಶಿ ಗೀತಾ ನಾಗೇಶ್‌, ಲೇಖಕಿ ವಿಜಯ ನಾಗೇಶ್‌ ಮಾತನಾಡಿದರು.

ಮುಖಂಡರಾದ ಎನ್‌.ಕೇಶವ ಮೂರ್ತಿ, ವೆಂಕಟಾಚಲಪತಿ ಶೆಟ್ಟಿ, ಜಯಕುಮಾರ್‌, ಎಸ್‌. ಶಂಕರ್‌, ನಾಗೇಂದ್ರ ಬಾಬು, ಪೋಟೋಬಾಬು,ಅರುಣ್‌ ಕುಮಾರ್‌, ಕಿರಣ್‌ ಕುಮಾರ್‌, ಎಸ್‌.ಸುನಿಲ್‌, ಪುರಸಭೆ ಸದಸ್ಯ ಕೆ.ವಿ.ಬಾಲು ಉಪಸ್ಥಿತರಿದ್ದರು.

ಯುವಜನ ಸಭಾದ ಮುಖಂಡರಾದ ಸುಮನ್‌, ಹೇಮಂತ್‌, ಎಸ್‌.ಆರ್‌. ನಾಗೇಶ್‌, ಕೃಷ್ಣ, ಭರತ್‌ ರೇಗಂಟಿ, ಸುಹಾಸ್‌, ಮಹಿಳಾ ಮಂಡಳಿಯ ಮೀನಾ ಸುಧೀರ್‌, ನಳಿನಿ ಎಸ್‌.ಜಿ. ಬಾಬು ಇದ್ದರು. ವಾಸವಿ ಯುವಜನ ಸಂಘದ ವತಿಯಿಂದ ಶಬರೀಶ್‌ ಅವರನ್ನು ಸನ್ಮಾನಿಸಲಾಯಿತು.

ಅಲಂಕೃತ ಬೆಳ್ಳಿರಥದಲ್ಲಿ ವಾಸವಿ ಮಾತೆಯ ಉತ್ಸವ ಮೂರ್ತಿಯನ್ನಿಟ್ಟು ಪೂಜಿಸಲಾಯಿತು. ಬೆಳ್ಳಿರಥದಲ್ಲಿ ಶಬರೀಶ್‌ ಮತ್ತು ಶರವಣ ಅವರನ್ನು ವಿವಿಧ ಕಲಾ ತಂಡಗಳೊಂದಿಗೆ ಕಲ್ಯಾಬಾಗಿಲು ಸಾರ್ವಜನಿಕ ವಿನಾಯಕ ಸ್ವಾಮಿ ದೇಗುಲದ ವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು.

ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ಪದಾಧಿಕಾರಿಗಳು ಮತ್ತು ಪಟ್ಟಣದ ವರ್ತಕರು, ಆರ್ಯವೈಶ್ಯ ಸಮುದಾಯದವರು ಇದ್ದರು.

ಪಟ್ಟಣದ ಕೋಟೆ ಮತ್ತು ಪೇಟೆಯ ಬೀದಿಗಳಲ್ಲಿ ಬಾಳೆಯಕಂಬ ಮತ್ತು ತಳಿರು ತೋರಣ ಕಟ್ಟಿ ಶೃಂಗರಿಸಲಾಗಿತ್ತು. ಕನ್ನಿಕಾ ಪರಮೇಶ್ವರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸಾಮೂಹಿಕ ಭೋಜನ ನಡೆಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !