ನೌಕರರ ಬೇಡಿಕೆ ಈಡೇರಿಸಲು ಆಗ್ರಹಿಸಿ ಬಮೂಲ್‌ ಅಧ್ಯಕ್ಷರಿಗೆ ಮನವಿ

7

ನೌಕರರ ಬೇಡಿಕೆ ಈಡೇರಿಸಲು ಆಗ್ರಹಿಸಿ ಬಮೂಲ್‌ ಅಧ್ಯಕ್ಷರಿಗೆ ಮನವಿ

Published:
Updated:
ಬಮೂಲ್‌ ಅಧ್ಯಕ್ಷ ಆಂಜಿನಪ್ಪಗೆ ಎಂ.ಪಿ.ಸಿ.ಎಸ್‌ ಸಂಘದ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಭಿನಂದಿಸಿ ಮನವಿ ಸಲ್ಲಿಸಲಾಯಿತು

ದೇವನಹಳ್ಳಿ: ಬೆಂಗಳೂರಿನ ಬಮೂಲ್‌ ಒಕ್ಕೂಟ ಆಡಳಿತ ಕಚೇರಿಯಲ್ಲಿ ಶುಕ್ರವಾರ ಬಮೂಲ್‌ ನಿರ್ದೇಶಕ ಬಿ.ಶ್ರೀನಿವಾಸ್‌ ನೇತೃತ್ವದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಬಮೂಲ್‌ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದರು.‌

ಮನವಿ ಸಲ್ಲಿಸಿ ಮಾತನಾಡಿದ ಎಂ.ಪಿ.ಸಿ.ಎಸ್‌ ಸಂಘದ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಬಿ.ಎನ್‌.ಲೋಕೇಶ್‌, ದೇವನಹಳ್ಳಿ ತಾಲ್ಲೂಕಿನಲ್ಲಿ ಇರುವ 560 ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಸಂಖ್ಯೆ 6321. ಇವರಿಗೆ ಹಾಲಿನ ಉತ್ಪಾದನೆ ಆಧರಿಸಿ ವೇತನ ನೀಡಲಾಗುತ್ತಿದೆ. ಕನಿಷ್ಠ ವೇತನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು.

ನೌಕರರ ಕುಟುಂಬಕ್ಕೆ ವೈದ್ಯಕೀಯ ಸೇವೆ ಕಲ್ಪಿಸಿಲ್ಲ. ಆಕಸ್ಮಿಕ ಮರಣ ಹೊಂದುವ ನೌಕರರ ಕುಟುಂಬಕ್ಕೆ ಕೇವಲ ₹1ಲಕ್ಷ ಮಾತ್ರ ಪರಿಹಾರ ನೀಡಲಾಗುತ್ತಿದ್ದು, ಇದನ್ನು ಕನಿಷ್ಠ 3ಲಕ್ಷಕ್ಕೆ ಏರಿಸಬೇಕು. ನಿವೃತ್ತಿ ನಂತರ ನೌಕರರಿಗೆ ಪಿಂಚಣಿ ವ್ಯವಸ್ಥೆ ಇಲ್ಲ. ಯಾವುದೇ ಸೇವಾ ಭದ್ರತೆ ಇಲ್ಲದೆ ದುಡಿಯುತ್ತಿರುವ ನೌಕರರಿಗೆ ಭದ್ರತೆ ಒದಗಿಸಬೇಕೆಂದು ಮನವಿ ಮಾಡಿದರು.

ಬಮೂಲ್‌ ಅಧ್ಯಕ್ಷ ಆಂಜಿನಪ್ಪ ಮಾತನಾಡಿ, ಒಕ್ಕೂಟ ಪ್ರಸ್ತುತ ಸಂಕಷ್ಟದಲ್ಲಿದೆ. ಒಂದು ದಿನಕ್ಕೆ 18 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿದೆ. ವಹಿವಾಟು ನಡೆಸಲು ಮಾರಾಟ ಕೇಂದ್ರ ಆಯ್ಕೆ ಮಾಡಬೇಕು. ಕನಕಪುರ ಬಳಿ ₹500 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಉದ್ಘಾಟನೆಯಾಗಿರುವ ಬಮೂಲ್‌ ಕೇಂದ್ರ ಆರಂಭವಾಗಬೇಕಿದೆ. ಒಕ್ಕೂಟದ ಪ್ರತಿಯೊಂದು ಸಾಧಕ ಬಾಧಕಗಳ ಬಗ್ಗೆ ಸದಸ್ಯರ ಮತ್ತು ಆಡಳಿತಾಧಿಕಾರಿಗಳ ಸಭೆ ಕರೆದು ಚರ್ಚಿಸಿದ ನಂತರ ನೌಕರರ ಬೇಡಿಕೆ ಪರಿಶೀಲಿಸಲಾಗುವುದು ಎಂದರು.

ಎಂ.ಪಿ.ಸಿ.ಎಸ್‌ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಎಚ್‌.ಚನ್ನಕೇಶವ, ಖಜಾಂಚಿ ರಮೇಶ್‌, ನಿರ್ದೇಶಕರಾದ ಮುನಿಕೃಷ್ಣ, ರಾಜಣ್ಣ, ವಿಜಯಕುಮಾರ್‌, ನಾರಾಯಣಸ್ವಾಮಿ, ಜಯರಾಮ್‌, ಮುನೇಗೌಡ, ಮುನಿರಾಜು, ಕೆ.ಸಿ.ಉಮಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !