ಹೊಸಕೋಟೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

7

ಹೊಸಕೋಟೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Published:
Updated:
Prajavani

ಹೊಸಕೋಟೆ: ವಿವಿಧ ಕಾರ್ಮಿಕ ಸಂಘಗಳು ಕರೆಕೊಟ್ಟಿದ್ದ ಭಾರತ್ ಬಂದ್ ಗೆ ಹೊಸಕೋಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವು ಅಂಗಡಿಗಳು ಬಂದ್ ಆಗಿದ್ದವು.

ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಲು ಹೋದ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ವಿವಿಧ ಸಂಘಟನೆಗಳ ನೂರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖಂಡರು, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ, ಬ್ಯಾಂಕ್‌ಗಳ ಖಾಸಗೀಕರಣ ಮತ್ತು ಬೆಲೆ ಏರಿಕೆ ಕ್ರಮವನ್ನು ಟೀಕಿಸಿದರು.

ಸಭೆಯಲ್ಲಿ ವಕೀಲರಾದ ಹರೀಂದ್ರ, ರೈತ ಮುಖಂಡ ಮನೋಹರ್ ಮತ್ತು ಜಯಂತ್ ಭಾಗವಹಿಸಿದ್ದರು. ನ್ಯಾಯಾಲಯ ಮತ್ತು ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !