ಪೆಟ್ರೋಲ್‌, ಡೀಸೆಲ್‌, ಸಿಲಿಂಡರ್‌ ದರ ಏರಿಕೆ: ಮಿಶ್ರ ಪ್ರತಿಕ್ರಿಯೆ

7
ದರ ಹೆಚ್ಚಳ– ಗ್ರಾಹಕರಿಗೆ ಸಂಕಷ್ಟ

ಪೆಟ್ರೋಲ್‌, ಡೀಸೆಲ್‌, ಸಿಲಿಂಡರ್‌ ದರ ಏರಿಕೆ: ಮಿಶ್ರ ಪ್ರತಿಕ್ರಿಯೆ

Published:
Updated:
Deccan Herald

ವಿಜಯಪುರ: ಪೆಟ್ರೋಲ್, ಡೀಸೆಲ್‌ ಮತ್ತು ಅಡುಗೆ ಅನಿಲ ಸಿಲಿಂಡರ್‌ಗಳ ದರ ಏರಿಕೆಯಾಗುತ್ತಿರುವುದಕ್ಕೆ ಜನರಿಂದ ಪರ, ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.

ದಿನನಿತ್ಯ ಬದಲಾಗುವಂತಹ ಪೆಟ್ರೋಲ್, ಡೀಸೆಲ್ ಬೆಲೆ ತೀವ್ರವಾಗಿ ಏರಿಕೆ ಕಂಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗಿರುವ ಕಾರಣ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕಡಿಮೆಯಾಗಿರುವ ಕಾರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎನ್ನಲಾಗಿದೆ.

ಇದರಿಂದ ಸಾಮಾನ್ಯ ಗ್ರಾಹಕರು ತೀವ್ರವಾಗಿ ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ರಾಜ್ಯ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ದರ ನಿಯಂತ್ರಣಕ್ಕಾಗಿ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಇದರಿಂದ ಸರಕು ಸಾಗಾಣಿಕೆ, ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗುವ ಸಂಭವವಿದೆ. ಸರ್ಕಾರಗಳು ಜನಸಾಮಾನ್ಯರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಬೆಲೆ ಇಳಿಸಬೇಕು ಎಂದು ಮುಖಂಡರಾದ ಶ್ರೀನಿವಾಸ್, ಅರುಣ್ ಕುಮಾರ್ ಒತ್ತಾಯಿಸಿದ್ದಾರೆ.

ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ರಾಜಗೋಪಾಲ್ ಮಾತನಾಡಿ, ಕೇಂದ್ರದ  ದೂರದೃಷ್ಟಿಯಿಲ್ಲದ ಯೋಜನೆಗಳಿಂದಾಗಿ ಜನಸಾಮಾನ್ಯರು ಪರದಾಡುತ್ತಿದ್ದಾರೆ. ನೋಟು ರದ್ದತಿ, ಜಿಎಸ್‌ಟಿ ಜಾರಿಗೆ ಬಂದ ನಂತರ ಗ್ರಾಹಕರು ಮಾತ್ರವಲ್ಲದೆ ಗ್ರಾಹಕರೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.

‘ಗೃಹಬಳಕೆಯ ಸಿಲಿಂಡರ್ ಬೆಲೆ ಲೋಕಸಭಾ ಚುನಾವಣೆಗೂ ಮುಂಚೆ ₹ 315 ಇತ್ತು. ಈಗ ₹ 820ಕ್ಕೆ ಏರಿಕೆಯಾಗಿದೆ. ವಾಣಿಜ್ಯ ಬಳಕೆಗಾಗಿ ಉಪಯೋಗಿಸುವ ಸಿಲಿಂಡರ್ ಗಳ ಬೆಲೆ ಪ್ರಸ್ತುತ ₹ 1,420 ಕ್ಕೆ ಏರಿಕೆಯಾಗಿದೆ. ಸಾಮಾನ್ಯ ಕುಟುಂಬದವರು ಒಂದು ಸಿಲಿಂಡರ್ ಖರೀದಿ ಮಾಡಬೇಕಾದರೆ ಒಂದು ವಾರ ಕಷ್ಟಪಟ್ಟು ಕೂಲಿ ಮಾಡಬೇಕಾಗಿದೆ. ಎಷ್ಟೋ ಮಂದಿ ಬಡವರು ಸಿಲಿಂಡರ್ ಖರೀದಿ ಮಾಡಲಿಕ್ಕೆ ಆಗುತ್ತಿಲ್ಲ’ ಎಂದಿದ್ದಾರೆ.

ಮುಖಂಡ ಹರೀಶ್ ಮಾತನಾಡಿ, ಹೊಗೆ ರಹಿತ ಸಮಾಜ ನಿರ್ಮಾಣವಾಗಬೇಕೆನ್ನುವ ಉದ್ದೇಶದಿಂದ ಕೇಂದ್ರವು ಉಜ್ವಲ ಯೋಜನೆಯಡಿಯಲ್ಲಿ ಪ್ರತಿಯೊಂದು ಕುಟುಂಬಕ್ಕೂ ಅನಿಲ ಸಂಪರ್ಕ ಕಲ್ಪಿಸಿದೆಯಾದರೂ ದಿನೇ ದಿನೇ ಏರಿಕೆಯಾಗುತ್ತಿರುವ ಸಿಲಿಂಡರ್‌ ದರ ಬಡವರ ಕಣ್ಣಲ್ಲಿ ನೀರು ತರಿಸುತ್ತಿದೆ ಎಂದು ತಿಳಿಸಿದ್ದಾರೆ.

ಸಿಲಿಂಡರ್ ಮುಗಿದ ಮೇಲೆ ಅನಿವಾರ್ಯವಾಗಿ ಅದನ್ನು ಖರೀದಿ ಮಾಡಲೇಬೇಕಾಗಿದೆ. ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಅಡುಗೆ ಅನಿಲಕ್ಕೇನೋ ಸಬ್ಸಿಡಿ ಕೊಡ್ತಾರೆ, ಪೆಟ್ರೋಲ್, ಡೀಸೆಲ್‌ಗೆಗೆ ಯಾರು ಸಬ್ಸಿಡಿ ಕೊಡ್ತಾರೆ. ಇದರಿಂದ ಗ್ರಾಹಕರಿಗೆ ಆಗುತ್ತಿರುವ ನಷ್ಟವನ್ನು ತುಂಬಿಕೊಡುವವರು ಯಾರು ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !