‘ವಿಶ್ವಮಟ್ಟಕ್ಕೆ ಏರಿದ ಮೋದಿ ವರ್ಚಸ್ಸು’

ಮಂಗಳವಾರ, ಏಪ್ರಿಲ್ 23, 2019
27 °C

‘ವಿಶ್ವಮಟ್ಟಕ್ಕೆ ಏರಿದ ಮೋದಿ ವರ್ಚಸ್ಸು’

Published:
Updated:
Prajavani

ದೇವನಹಳ್ಳಿ: ‘ಬಿಜೆಪಿಯ ದೂರದೃಷ್ಟಿ ಚಿಂತನೆಗಳನ್ನು ಅರಿತು ಮತ ನೀಡಿ’ ಎಂದು ಬಿಜಿಪಿ ಮುಖಂಡ ಅಶ್ವಥ್‌ ನಾರಾಯಣ ಮನವಿ ಮಾಡಿದರು.

ನಗರದ ವಿವಿಧ ಬಡಾವಣೆಗಳಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಪರ ಮತಯಾಚಿಸಿ ಅವರು ಮಾತನಾಡಿದರು.

‘ಬಿಜೆಪಿ ಬಗ್ಗೆ ಟೀಕಿಸಲು ವಿರೋಧ ಪಕ್ಷಗಳಿಗೆ ಯಾವುದೇ ಅಸ್ತ್ರಗಳಿಲ್ಲ. ಪಾರದರ್ಶಕ, ಭ್ರಷ್ಟಾಚಾರಮುಕ್ತ ಸರ್ಕಾರವನ್ನು ಮೋದಿ ನೀಡಿದ್ದಾರೆ. ಐದು ವರ್ಷದಲ್ಲಿ ಮೋದಿ ವರ್ಚಸ್ಸು ವಿಶ್ವ ಮಟ್ಟಕ್ಕೆ ಏರಿದೆ. ಪ್ರಜ್ಞಾವಂತ ಮತದಾರರು ದೇಶದ ಭವಿಷ್ಯದ ದೃಷ್ಟಿಯಿಂದ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಗೆ ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕ ಕಾರ್ಯದರ್ಶಿ ಶರತ್ ಬಚ್ಚೇಗೌಡ ಮಾತನಾಡಿ, ‘ಯುವ ಸಮುದಾಯ ಕಳೆದ ಬಾರಿಗಿಂದ ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿದೆ. ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಜಾರಿಗೊಳಿಸಿರುವ ಜನಪರ ಯೋಜನೆಗಳು ಮತ್ತು ದೇಶದ ಭದ್ರತೆಯನ್ನು ಜನರು ಗಮನಿಸಲಿದ್ದಾರೆ’ ಎಂದು ಹೇಳಿದರು.

ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಹನುಮಂತರಾಯಪ್ಪ, ಬಿಜೆಪಿ ರಾಜ್ಯ ಪರಿಷದ್ ಸದಸ್ಯ ದೇ.ಸು.ನಾಗರಾಜ್, ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ನಾಗರಾಜ್‌ ಗೌಡ, ಬಿಜೆಪಿ ನಗರ ಘಟಕ ಅಧ್ಯಕ್ಷ ನಿಲೇರಿ ಮಂಜುನಾಥ್, ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಆನಂದ್ ಗೌಡ, ಮುಖಂಡರಾದ ಎಂ.ಶ್ರೀನಿವಾಸ್, ಹನುಮಮತರಾಯಪ್ಪ, ಮಹಿಳಾ ಮೋರ್ಚಾ ಪದಾಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !