‘ಸುಳ್ಳು ಹೇಳುವುದರಲ್ಲೇ ಮೊಯಿಲಿ ಕಾಲಹರಣ’

ಶುಕ್ರವಾರ, ಮಾರ್ಚ್ 22, 2019
31 °C
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಡಾ.ಸಿ.ಎಸ್. ದ್ವಾರಕನಾಥ್ ಟೀಕೆ

‘ಸುಳ್ಳು ಹೇಳುವುದರಲ್ಲೇ ಮೊಯಿಲಿ ಕಾಲಹರಣ’

Published:
Updated:
Prajavani

ದೊಡ್ಡಬಳ್ಳಾಪುರ: ಶಾಲೆಯಲ್ಲಿ ಮಕ್ಕಳಂತೆ ಹತ್ತು ವರ್ಷಗಳ ಕಾಲ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯಿಲಿ ಅವರು ಸುಳ್ಳು ಹೇಳುತ್ತಲೇ ಕಾಲಾಹಣರ ಮಾಡಿದ್ದಾರೆ ವಿನಹ ಕುಡಿಯುವ ನೀರಿ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಡಾ.ಸಿ.ಎಸ್. ದ್ವಾರಕನಾಥ್ ಹೇಳಿದರು.

ನಗರದ ಬಿಎಸ್‌ಪಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಜನ ಪ್ರತಿನಿಧಿ ಆಯ್ಕೆಯಾದಾಗ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವುದು ಸಹಜ. ಆದರೆ ಚುನಾವಣೆ ಘೋಷಣೆಗೆ ಕ್ಷಣಗಣನೆ ಪ್ರಾರಂಭವಾಗಿರುವ ಈ ದಿನಗಳಲ್ಲಿ ವೀರಪ್ಪ ಮೊಯಿಲಿ ಜನರನ್ನು ಮೋಸಗೊಳಿಸಲು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಹಾಸ್ಯಾಸ್ಪದ. ಸಜ್ಜನರು ರಾಜಕೀಯ ಕ್ಷೇತ್ರದಿಂದ ದೂರ ಉಳಿದಿರುವುದರಿಂದಲೇ ಇವತ್ತು ರಾಜಕೀಯ ಹಾಳಾಗುತ್ತಿದೆ ಎಂದರು.

ಬಿಎಸ್‌ಪಿ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದಿಂದ ದೂರ ಇದೆ. ಹೀಗಾಗಿ ರಾಜ್ಯದಲ್ಲೂ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಸ್ಪರ್ಧಿಸಲಿದೆ. ಅನಿವಾರ್ಯ ಸಂದರ್ಭದಲ್ಲಿ ಅಭಿವೃದ್ಧಿಗಾಗಿ ಇತರೆ ಪಕ್ಷಗಳಿಗೆ ಬೆಂಬಲ ನೀಡಲಿದೆಯೇ ಹೊರತು ಅಧಿಕಾರಕ್ಕಾಗಿ ಅಲ್ಲ. ಮಯಾವತಿ ಅವರ ಭೂಮಿ ಹಂಚಿಕೆ, ಮೇಲ್ವರ್ಗದವರು ಸೇರಿದಂತೆ ಎಲ್ಲರಿಗೂ ಮೀಸಲಾತಿ ಕಲ್ಪಿಸಿದ್ದು ಉತ್ತಮ ಕೆಲಸಗಳಾಗಿವೆ ಎಂದರು.

ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಹರಿರಾಂ ಮಾತನಾಡಿ, 70 ವರ್ಷಗಳಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಆಳ್ವಿಕೆ ನಡೆಸಿದರೂ ಸಂವಿಧಾನದ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಜನಪರ ಕಾಳಜಿ ಇಲ್ಲದೆ ತಮ್ಮ ಖಜಾನೆ ತುಂಬಿಸಿಕೊಳ್ಳುವುದರ ಕಡೆಗಷ್ಟೇ ಕಾಳಜಿ ವಹಿಸಿದವು. ಮೋದಿ ಅವರು ಶ್ರೀಮಂತರ ಪರವಾಗಿಯಷ್ಟೇ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಇವತ್ತು ರೂಪಾಯಿ ಮೌಲ್ಯ ಕುಸಿತವಾಗುತ್ತಲೇ ಇದೆ. ಈಗ ಸೈನಿಕರನ್ನು ಬೀದಿಗೆ ತಂದು ಮತಕೇಳುವ ಸ್ಥಿತಿಗೆ ಬಿಜೆಪಿ ಬಂದಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಪುರುಷೋತ್ತಮ್, ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತೇಗೌಡ, ನಗರ ಘಟಕದ ಅಧ್ಯಕ್ಷ ಆಂಜಿನಪ್ಪ, ತಾಲ್ಲೂಕು ಉಸ್ತುವಾರಿ ಕೆ.ವಿ. ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾಬು, ಮುಖಂಡರಾದ ಮೈಲಾರಪ್ಪ, ರವಿ, ದಾಳಪ್ಪ, ಬಸವರಾಜು, ನಂಜುಂಡಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !