ಧಾರ್ಮಿಕತೆಯಿಂದ ಆಂತರಿಕ ತೊಳಲಾಟಕ್ಕೆ ಮುಕ್ತಿ: ಕೆ.ಎಚ್. ಮುನಿಯಪ್ಪ

7
ಸಾಯಿಬಾಬಾ ದೇವಾಲಯದಲ್ಲಿ ಮುನಿಯಪ್ಪ ಪೂಜೆ

ಧಾರ್ಮಿಕತೆಯಿಂದ ಆಂತರಿಕ ತೊಳಲಾಟಕ್ಕೆ ಮುಕ್ತಿ: ಕೆ.ಎಚ್. ಮುನಿಯಪ್ಪ

Published:
Updated:
Deccan Herald

ವಿಜಯಪುರ: ಸಮಾಜದಲ್ಲಿನ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ದೇವರ ಮೊರೆಹೋಗುವುದು, ಧಾರ್ಮಿಕ ಕಾರ್ಯಕ್ರಮ ಮಾಡುವುದು ಉತ್ತಮವಾದ ಮಾರ್ಗವಾಗಿದೆ ಎಂದು ಕೋಲಾರ ಸಂಸದ ಕೆ.ಎಚ್. ಮುನಿಯಪ್ಪ ಹೇಳಿದರು.

ಸಮೀಪದ ಭಟ್ರೇನಹಳ್ಳಿ ಸಾಯಿನಾಥ ಜ್ಞಾನಮಂದಿರದಲ್ಲಿ ಶಿರಡಿ ಸಾಯಿಬಾಬಾ ಅವರ ಸಮಾಧಿ ಶತಮಾನೋತ್ಸವ ಅಂಗವಾಗಿ ಶನಿವಾರ ಕುಟುಂಬ ಸಮೇತರಾಗಿ ಪೂಜಾ ವಿಧಾನಗಳನ್ನು ನೆರವೇರಿಸಿದ ನಂತರ ದೇವಾಲಯಕ್ಕೆ ಬಂದಿದ್ದ ಮುಖಂಡರು, ಭಕ್ತರನ್ನು ಸನ್ಮಾನಿಸಿ ಮಾತನಾಡಿದರು.

‘ಇಂಥ ಆಂತರಿಕ ತೊಳಲಾಟಗಳಿಗೆ ಧಾರ್ಮಿಕ ಕಾರ್ಯಕ್ರಮಗಳಿಂದ ಮಾತ್ರ ಮುಕ್ತಿ ದೊರೆಯಲಿದೆ. ಜೀವನದಲ್ಲಿ ಸುಖ, ಸಂತೋಷ, ನೆಮ್ಮದಿ ನಿರಂತರವಾಗಿ ಸಿಗಬೇಕಾದರೆ ದೇವರ ಬಗ್ಗೆ ಜ್ಞಾನ, ನಿರಂತರ ಸತ್ಕರ್ಮಗಳನ್ನು ಮಾಡುವ ಮೂಲಕ ಒಲಿಸಿಕೊಳ್ಳಬೇಕು. ಸನ್ಮಾರ್ಗವನ್ನು ತೋರಿದ ಗುರು ಶಿರಡಿ ಸಾಯಿಬಾಬಾ ಅವರ ಮಾರ್ಗದರ್ಶನದಲ್ಲಿ ನಡೆಯುವುದು ನಮ್ಮೆಲ್ಲರ ಧರ್ಮ’ ಎಂದರು.

‘ಸಾಂಸಾರಿಕ ಮತ್ತು ವ್ಯವಹಾರಿಕ ಜಂಜಾಟಗಳು ಇಂದು ಪ್ರತಿಯೊಬ್ಬರ ಜೀವನದಲ್ಲಿ ನೆಮ್ಮದಿ ದೂರ ಮಾಡಿವೆ. ಅಶಾಂತಿ, ಅಸಹನೆ, ಅಸಮಾಧಾನ ಎಲ್ಲರ ಮನೆ, ಮನಗಳಲ್ಲಿ ತುಂಬಿಕೊಂಡಿವೆ’ ಎಂದರು.

ನಾಗರತ್ನಮ್ಮ ಕೆ.ಎಚ್. ಮುನಿಯಪ್ಪ, ದೇವಾಲಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಮುನಿರಾಜು, ಸದಸ್ಯ ಕೆ.ಎಂ. ಸತೀಶ್, ಎಚ್.ವಿ. ರಾಮಕೃಷ್ಣಪ್ಪ, ಹುಜುಗೂರು ರಾಮಣ್ಣ, ಗಂಗನಹಳ್ಳಿ ಬಿ.ಸಿ. ವೆಂಕಟೇಶಪ್ಪ, ಎಂ.ಎಚ್. ವೆಂಕಟರಾಯಪ್ಪ, ಚಂದೇನಹಳ್ಳಿ ಮುನಿಯಪ್ಪ, ದೇವರಾಜ್, ಕೆ.ಎಂ. ರವಿಚಂದ್ರ, ಶ್ರೀನಿವಾಸ್, ಸಂಸದರ ಆಪ್ತ ಸಹಾಯಕ ವಿಶ್ವನಾಥ ರೆಡ್ಡಿ, ಭಟ್ರೇನಹಳ್ಳಿ ನಾರಾಯಣಪ್ಪ, ಸೀತಾರಾಮ ರೆಡ್ಡಿ, ಎಂ.ರಾಮಪ್ಪ, ವೆಂಕಟಪ್ಪ, ಶಶಿಕುಮಾರ್, ದೇವರಾಜ್, ಸುಗಟೂರು ದೇವರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !