ಮಂಗಳವಾರ, ಡಿಸೆಂಬರ್ 10, 2019
20 °C

ನನ್ನ ಗೆಲವು ನಿಶ್ಚಿತ – ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ನಾನು ತಾಲ್ಲೂಕಿನಲ್ಲಿ ಮಾಡಿರುವ ಅಬಿವೃದ್ದಿ ಕೆಲಸಗಳನ್ನು ಮಾಡಿದ್ದು ಈಗ ಕೆಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರವಿದೆ. ನಾನು ಗೆದ್ದ ಮೇಲೆ ತಾಲ್ಲೂಕನ್ನು ಮತ್ತಷ್ಟು ಅಭಿವೃದ್ಧಿ ಮಾಡುವುದಾಗಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದರು.

ನಂದಗುಡಿ ಹೋಬಳಿಯಲ್ಲಿ ಪ್ರಚಾರ ಭಾಷಣ ಮಾಡಿದ ಅವರು, ‘ಯಡಿಯೂರಪ್ಪನವರು ಹೇಳಿದಂತೆ ನಾನು ಗೆದ್ದ 24 ಘಂಟೆಯೊಳಗೆ ಮಂತ್ರಿಯಾಗಿ ಕೆಲಸಮಾಡುತ್ತೇನೆ. ಆದರೆ ಬೇರೆಯವರು ಗೆದ್ದರೆ ಕೇವಲ ಶಾಸಕರಷ್ಟೆ. ಅವರಿಂದ ಅಭಿವೃದ್ಧಿ ಕೆಲಸ ಸಾದ್ಯವಿಲ್ಲ. ಅವರಲ್ಲಿ ಯಾರೂ ತಾಲ್ಲೂಕಿನ ಯಾವುದೇ ಹಳ್ಳಿಗೆ ಒಂದು ಕೊಳವೆ ಬಾವಿಯನ್ನೂ ಹಾಕಿಸಿಲ್ಲ’ ಎಂದರು.

‘ಅನರ್ಹ ಶಾಸಕರು ಹಣದ ಆಸೆಗೆ ಪಕ್ಷಾಂತರ ಮಾಡಿಲ್ಲ. ಎಲ್ಲರೂ ಹಣವಂತರೇ. ಸಿದ್ದರಾಮಯ್ಯ ಅವರನ್ನು ಅಭಿವೃದ್ಧಿ ಅನುದಾನ ಕೇಳಿದಾಗ ಕುಮಾರಸ್ವಾಮಿ ನನ್ನ ಮಾತನ್ನೇ ಕೇಳುತ್ತಿಲ್ಲ ಎಂದರು. ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರೂ ದಳ ಹಾಗೂ ಕಾಂಗ್ರೆಸ್ ಪಕ್ಷದ ಜಂಟಿ ಶಾಸಕಾಂಗ ಸಭೆ ಕರೆಯಲಾಗಲಿಲ್ಲ. ಸಿದ್ದರಾಮಯ್ಯ ಅವರು ಸಮಿಶ್ರ ಸರ್ಕಾರವನ್ನು ನಿಭಾಯಿಸಲು ಆಗಲಿಲ್ಲ. ನಮಗೆ ಕ್ಷೇತ್ರದ ಅಭಿವೃದ್ದಿಯಾಗಲಿಲ್ಲ ಎಂದು ನಾವು ಸರ್ಕಾರದಿಂದ ಹೊರಬಂದಿದ್ದು ಮುಂದಿನ ಚುನಾವಣೆಯಲ್ಲಿ ತಮ್ಮ ಗೆಲುವು ನಿಶ್ಚಿತ’ ಎಂದರು.

ಪ್ರತಿಕ್ರಿಯಿಸಿ (+)