ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟಿಬಿಗೆ ಮೂರನೇ ಸ್ಥಾನ ಖಚಿತ: ಐವನ್ ಭವಿಷ್ಯ

Last Updated 28 ನವೆಂಬರ್ 2019, 15:59 IST
ಅಕ್ಷರ ಗಾತ್ರ

ಹೊಸಕೋಟೆ: ತಾಲ್ಲೂಕಿನ ಉಪಚುನಾವಣೆಯಲ್ಲಿ ಸ್ಪರ್ಧೆಯಿರುವುದು ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಮಧ್ಯೆ ಮಾತ್ರ. ಬಿಜೆಪಿ ಅಭ್ಯರ್ಥಿಗೆ ಮೂರನೆ ಸ್ಥಾನ ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸುದ್ದಿಗೋಷ್ಠಿಯಲ್ಲಿ ಭವಿಷ್ಯ ನುಡಿದರು.

‘ತಾಲ್ಲೂಕಿನಲ್ಲಿರುವ ಮತದಾರರು ಸ್ವಾಭಿಮಾನಿಗಳಾಗಿದ್ದು ಅವರು ಹಣ, ಅಮಿಷಕ್ಕೆ ಒಳಗಾಗುವುದಿಲ್ಲ. ಈಗಾಗಲೇ ಎಂಟಿಬಿ ನಾಗರಾಜ್ ಮತಕ್ಕೆ ಹಣ ಹಾಗೂ 5 ಮತಗಳಿರುವವರಿಗೆ ಉಂಗುರವನ್ನು ಕೊಡುತ್ತಿದ್ದು, ಜನತೆ ಅದಕ್ಕೆ ಮರುಳಾಗುವುದಿಲ್ಲವೆಂದು ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಜನ ತೋರಿಸಿದ್ದಾರೆ’ ಎಂದರು.

‘ಎಂಟಿಬಿ ನಾಗರಾಜ್ ತಮ್ಮ ಹೃದಯದಲ್ಲಿ ಮೊದಲು ಸಿದ್ದರಾಮಯ್ಯಅವರನ್ನು ಇಟ್ಟುಕೊಂಡಿದ್ದರು. ಅವರನ್ನು ತೆಗೆದು ಯಡಿಯೂರಪ್ಪನವರನ್ನು ಇಟ್ಟುಕೊಂಡಿದ್ದಾರೆ. ಅವರು ಹೀಗೆ ಪದೇ ಪದೇ ಹೃದಯವನ್ನು ಆಪರೇಷನ್ ಮಾಡಿಸಿಕೊಂಡು ವ್ಯಕ್ತಿಗಳನ್ನು ಬದಲಾಯಿಸುತ್ತಿದ್ದರೆ ಅವರ ಆರೋಗ್ಯ ವೆತ್ಯಾಸವಾಗುತ್ತದೆ ಅವರಿಗೂ ವಯಸ್ಸಾಗಿದೆ’ ಎಂದು ಲೇವಡಿಮಾಡಿದರು.

‘ಸಾಮಾನ್ಯವಾಗಿ ಉಪಚುನಾವಣೆ ಬರುವುದು ಶಾಸಕ ನಿಧನಹೊಂದಿದರೆ ಅಥವಾ ಅವನಿಗೆ ರಾಜಕೀಯ ಬೇಸರವಾಗಿ ಬಿಟ್ಟರೆ ಆದರೆ ಇಲ್ಲಿ ಎಂಟಿಬಿ ನಾಗರಾಜ್ ತಮ್ಮ ಕ್ಷೇತ್ರದ ಅಭಿವೃದ್ದಿಯಾಗಲಿಲ್ಲ. ಅದಕ್ಕಾಗಿ ರಾಜಿನಾಮೆ ಕೊಟ್ಟೆ ಎನ್ನುತ್ತಿದ್ದಾರೆ ಆದರೆ ಒಬ್ಬ ಮಂತ್ರಿಯಾಗಿ ತನ್ನ ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳಲಾಗದವನು ರಾಜಕೀಯಕ್ಕೆ ಅಸಮರ್ಥ ಎಂದರು. ಚುನಾವಣೆಯ ಪಲಿತಾಂಶದ ಬಳಿಕ ರಾಜ್ಯದ ರಾಜಕೀಯ ಪರಿಸ್ಥಿತಿ ಬದಲಾಗುತ್ತದೆ ಶಾಸಕರನ್ನು ಖರೀದಿಸಿ ಅಧಿಕಾರ ಮಾಡುವ ಬಿಜೆಪಿಯ ದುರಾಡಳಿತ ಮುಗಿಯುತ್ತದೆ’ ಎಂದರು.ಶಾಸಕರಾದ ಶ್ರೀನಿವಾಸ್, ರಾಘವೇಂದ್ರ ಹಿಟ್ನಾಳ್‌, ಕಾಂಗ್ರೆಸ್ ನಗರ ಅಧ್ಯಕ್ಷ ಹೇಮಂತಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT