ಶುಕ್ರವಾರ, ಡಿಸೆಂಬರ್ 13, 2019
24 °C

ಕೊಲೆ ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಪ್ರಿಯಕರನನ್ನು ಹತ್ಯೆ ಮಾಡಿದ್ದ ಗಂಡ ಹೆಂಡತಿಯನ್ನು ತಾಲ್ಲೂಕಿನ ಜಿಗಣಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ದಾವಣಗೆರೆಯಿಂದ ಬಂದು ನೆಲೆಸಿರುವ ಸುರೇಖಾ (38) ಮತ್ತು ಮುನ್ನಾ (41) ಎಂದು ಗುರುತಿಸಲಾಗಿದೆ.

ನವೆಂಬರ್‌ 18ರಂದು ಜಿಗಣಿ ಎಪಿಸಿ ಸರ್ಕಲ್‌ ಬಳಿ ಕಿರಣ್‌ಕುಮಾರ್‌ (25) ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಜಿಗಣಿ ಪೊಲೀಸರು ಹತ್ಯೆಯ ಜಾಡು ಹಿಡಿದು ತೆರಳಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಭದ್ರಾವತಿಯಿಂದ ಬಂದು ನೆಲೆಸಿರುವ ಕಿರಣ್‌, ಸುರೇಖಾಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದರು. ಅವರನ್ನು ಪ್ರೀತಿಸಿ ಕೊನೆಗೆ ಗಂಡ ಮತ್ತು ಮಕ್ಕಳನ್ನು ಬಿಟ್ಟು ಎರಡನೇ ವಿವಾಹವಾಗಿದ್ದಳು ಎನ್ನಲಾಗಿದೆ. ಈ ನಡುವೆ ಕಿರಣ್‌ ತನ್ನ ಸಂಬಂಧಿಯೊಬ್ಬರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಇದರಿಂದ ಕುಪಿತಗೊಂಡ ಸುರೇಖಾ ಹಳೆಯ ಗಂಡ ಮುನ್ನಾನೊಂದಿಗೆ ಸೇರಿ ಪ್ರಿಯಕರನನ್ನು ಹತ್ಯೆ ಮಾಡಲು ಸಂಚು ಮಾಡಿದ್ದಳು. ಎಪಿಸಿ ಸರ್ಕಲ್‌ನ ಮನೆಯೊಂದರ ಕೊಠಡಿಯಲ್ಲಿ ಹತ್ಯೆ ಮಾಡಿ ಬೆಳಗಾವಿ ಕಡೆ ಪರಾರಿಯಾಗಿದ್ದರು. ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ವಿಶ್ವನಾಥ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಜಾಡು ಹಿಡಿದು ಕೇವಲ ಮೂರು ದಿನದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರತಿಕ್ರಿಯಿಸಿ (+)