ಭಾಗ್ಯಶ್ರೀ ಹತ್ಯೆ ಪ್ರಕರಣ: ಕುಟುಂಬಸ್ಥರಿಗೆ ಸಾಂತ್ವನ

7

ಭಾಗ್ಯಶ್ರೀ ಹತ್ಯೆ ಪ್ರಕರಣ: ಕುಟುಂಬಸ್ಥರಿಗೆ ಸಾಂತ್ವನ

Published:
Updated:
Deccan Herald

ವಿಜಯಪುರ: ಹರಳೂರು ನಾಗೇನಹಳ್ಳಿ ನಿವಾಸಿ ಭಾಗ್ಯಶ್ರೀ(25) ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಶನಿವಾರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ ಮತ್ತು ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಭೇಟಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆ ರವಿಕಲಾ ಮಾತನಾಡಿ, ಪುರುಷರಷ್ಟೇ ಸಮಾನವಾಗಿ ಮಹಿಳೆಯರು ದುಡಿಯಬೇಕು ಎನ್ನುವ ಆಸೆಯಿಂದ ಹೆಣ್ಣು ಮಕ್ಕಳು ಹೊರಗೆ ಹೋಗುತ್ತಾರೆ. ಅವರು ಮನೆಗೆ ಹಿಂತಿರುಗಿ ಬರುವ ತನಕ ಯಾವುದೇ ಭದ್ರತೆ ಇಲ್ಲದಂತೆ ಕೆಲಸ ಮಾಡಬೇಕಾಗಿದ್ದು, ಇಂತಹ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸುವ ಹೊಣೆಗಾರಿಕೆ ಸರ್ಕಾರ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ದೊಡ್ಡಕುರುಬರಹಳ್ಳಿ ನಾಗರಾಜ್, ರೆಡ್ಡಿಹಳ್ಳಿ ಮುನಿರಾಜು, ತಿಂಡ್ಲು ಕೆಂಪಣ್ಣ ಇದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !