ಬಚ್ಚೇಗೌಡರಿಗೆ ಬೆಂಬಲ

ಗುರುವಾರ , ಏಪ್ರಿಲ್ 25, 2019
31 °C

ಬಚ್ಚೇಗೌಡರಿಗೆ ಬೆಂಬಲ

Published:
Updated:
Prajavani

ಹೊಸಕೋಟೆ: ‘ಬಚ್ಚೇಗೌಡರ ರಾಜಕೀಯ ಜೀವನದಲ್ಲಿ ಅವರು ಯಾವತ್ತೂ ಮುಸ್ಲಿಂ ಜನಾಂಗಕ್ಕೆ ಮೋಸ ಮಾಡಿಲ್ಲ. ಆದರೆ ಕಳೆದ ಚುನಾವಣೆಗಳಲ್ಲಿ ನಾವೇ ಸರಿಯಾದ ರೀತಿಯಲ್ಲಿ ಸಹಕಾರ ನೀಡದೆ ಅವರ ಸೋಲಿಗೆ ಕಾರಣವಾಗಿದ್ದೇವೆ. ಹಾಗಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಬಚ್ಚೇಗೌಡರ ಗೆಲುವಿಗೆ ಶ್ರಮಿಸುತ್ತೇವೆ’ ಎಂದು ಮುಸ್ಲಿಂ ಸಮುದಾಯದ ಪರವಾಗಿ ನಿಸಾರ್ ತಿಳಿಸಿದರು.

‘ಬಿಜೆಪಿ ಮುಸ್ಲಿಂ ವಿರೋಧಿಯೆಂದು ದೇಶದಲ್ಲಿ ಕಾಂಗ್ರೆಸ್ ಬಿಂಬಿಸುತ್ತಿದೆ. ಆದರೆ ಹೊಸಕೋಟೆಯಲ್ಲಿ ಬಚ್ಚೇಗೌಡರು ಎಂದೂ ಆ ರೀತಿ ನಡೆದುಕೊಂಡಿಲ್ಲ. ಅವರ ಮಗ ಶರತ್ ಬಚ್ಚೇಗೌಡರು ಸಹ ನಮ್ಮ ಜೊತೆಯಲ್ಲಿ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಹಾಗಾಗಿ ನಾವು ಚಿಕ್ಕಬಳ್ಳಾಪುರ ಕ್ಷೇತ್ರದ ಹಾಗೂ ಇಡೀ ರಾಜ್ಯದ ಮುಸ್ಲಿಂ ಬಾಂಧವರನ್ನು ಬಿಜೆಪಿಗೆ ಮತ ಹಾಕಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಲು ಸಹಕರಿಸಿ’ ಎಂದು ಕೋರಿದರು.

ಅವರೊಂದಿಗೆ ಇಂತಿಯಾಜ್ ಪಾಶ, ರಿಜ್ವಾನ್, ನಿಸಾರ್ ಅಹಮದ್ ಮುಂತಾದವರು ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !