ಮಂಗಳವಾರ, ಮಾರ್ಚ್ 21, 2023
23 °C

ನಾರನಹಳ್ಳಿ: ಚಿರತೆ ದಾಳಿಗೆ ಕುರಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನ ನಾರನಹಳ್ಳಿಯಲ್ಲಿ ಗುರುವಾರ ಮಧ್ಯಾಹ್ನ ಕುರಿ ಹಿಂಡಿನ ಮೇಲೆ ದಾಳಿ ನಡೆಸಿರುವ ಚಿರತೆ ಕುರಿಯೊಂದನ್ನು ಬಲಿ ಪಡೆದಿದೆ.

ಗ್ರಾಮದ ಮಾರೇಗೌಡ ಎಂಬುವರು ಗ್ರಾಮ ಸಮೀಪದ ಬಯಲಿನಲ್ಲಿ ಕುರಿಗಳನ್ನು ಬಿಸಿಲಿನ ಕಾರಣದಿಂದ ಮೇಯಿಸಿಕೊಂಡು ಮಧ್ಯಾಹ್ನ ಮನೆ ಕಡೆಗೆ ಬರುವ ವೇಳೆ ಒಂದು ಕುರಿ ಕಾಣೆಯಾಗಿರುವುದನ್ನು ಗಮನಿಸಿ ಹುಡುಕಾಟ ನಡೆಸಿದ್ದಾರೆ. ಆಗ ಚಿರತೆಯು ಕುರಿಯನ್ನು ಅರೆಬರೆಯಾಗಿ ತಿಂದಿರುವುದು ಗಮನಕ್ಕೆ ಬಂದಿದೆ.

ಈ ಘಟನೆಯಿಂದ ರೈತರು ಜಮೀನು ಕಡೆಗೆ ಹೋಗಲು ಭಯಪಡುವಂತಾಗಿದೆ ಎಂದು ರೈತ ಗಣೇಶ್ ತಿಳಿಸಿದ್ದಾರೆ.

ಕೆಲವೇ ದಿನಗಳ ಹಿಂದೆಯಷ್ಟೇ ಮದಗೊಂಡನಹಳ್ಳಿ, ನರಸಯ್ಯನ ಅಗ್ರಹಾರ ಗ್ರಾಮದಲ್ಲಿ ಚಿರತೆ ಮೇಕೆ ಹಿಂಡಿನ ಮೇಲೆ ದಾಳಿ ನಡೆಸಿ ಮೇಕೆಗಳನ್ನು ಬಲಿ ಪಡೆದಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು