ಶನಿವಾರ, ಜನವರಿ 18, 2020
25 °C

ದುರಾಸೆಯಿಂದಾಗಿ ಪ್ರಕೃತಿಗೆ ಆಪತ್ತು: ಡಾ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಭವಿಷ್ಯದ ದಿನಗಳಲ್ಲಿನ ಕರಾಳ ದಿನಗಳಿಂದ ಮುಕ್ತವಾಗಲು ಪರಿಸರ ಸಂರಕ್ಷಣೆ ಅತ್ಯಂತ ಜರೂರು ಅವಶ್ಯಕತೆಯಾಗಿದೆ. ಹಾಗಾಗಿ ಯುವಕರು ಪರಿಸರ ಸಂರಕ್ಷಣೆ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ರವಿ ತಿಳಿಸಿದರು.

ಅವರು ಪಟ್ಟಣದಲ್ಲಿ ಕಾವೇರಿ ಪದವಿ ಪೂರ್ವ ಕಾಲೇಜು ಮತ್ತು ಲಯನ್ಸ್‌ ಕ್ಲಬ್‌ ವತಿಯಿಂದ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನುಷ್ಯನ ದುರಾಸೆಯಿಂದಾಗಿ ಪ್ರಕೃತಿ ಆಪತ್ತಿಗೆ ಸಿಲುಕಿದೆ. ಇದರ ಪರಿಣಾಮವಾಗಿ ಅತಿವೃಷ್ಠಿ, ಅನಾವೃಷ್ಠಿ, ಭೂತಾಪ ಏರಿಕೆ, ಹವಾಮಾನ ವೈಪರಿತ್ಯ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಮುಂದಿನ ಭವಿಷ್ಯದ ದೃಷ್ಠಿಯಿಂದ ನದಿ, ಕೆರೆ, ಅರಣ್ಯ, ಸುತ್ತಮುತ್ತಲಿನ ಪರಿಸರದ ಸಂರಕ್ಷಣೆ ಮತ್ತು ಗಿಡ ಮರಗಳನ್ನು ಬೆಳೆಸುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಮಹಿಳಾ ಹೋರಾಟಗಾರ್ತಿ ಮಮತಾ ಮಾತನಾಡಿ, ಆಧುನಿಕತೆಯ ಫಲವಾಗಿ ಹಲವು ಸೌಲಭ್ಯಗಳು ದೊರೆತಿದ್ದರೂ ಪರಿಸರ ನಾಶವಾಗುತ್ತಿದೆ. ಜೀವ ವೈವಿಧ್ಯ ಸಮಸ್ಯೆಗೆ ಸಿಲುಕಿದೆ. ಹಾಗಾಗಿ ಶಾಲಾ ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದರು.

ಮುಖಂಡರಾದ ಸುಶೀಲಾ ಜಿಂಗಾಡೆ, ಲಕ್ಷ್ಮೀನಾರಾಯಣ್‌ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು