ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ಹೆಗ್ಗುಂದ ಮಾರಮ್ಮ ಜಾತ್ರೆ ಏ.17ರಿಂದ ಆರಂಭವಾಗಲಿದೆ.

ದೇವಸ್ಥಾನ ದಲ್ಲಿ ಧಾರ್ಮಿಕ ಕಾರ್ಯಗಳೊಂದಿಗೆ ಮಾರಮ್ಮನಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ದೇವಿಯ ಉತ್ಸವ ಮೂರ್ತಿಯನ್ನು ತಮಟೆ ಹಾಗೂ ಅರೆವಾದ್ಯದೊಂದಿಗೆ ಮೆರವಣಿಗೆ ಯಲ್ಲಿ ಕರೆದೊಯ್ದು, ಹಳೇ ಊರು ಆಂಜನೇಯನಿಗೆ ಪೂಜೆ ಮಾಡಿಸುತ್ತಾರೆ.

ನರಸೀಪುರದ ವೀರಭದ್ರಾಚಾರ್ ಕುಟುಂಬದವರಿಂದ ಪ್ರಥಮ ಪೂಜೆ ಮಾಡಲಾಗುತ್ತದೆ. ಅಲ್ಲಿಂದ ಸುಂದರ್ ರಾವ್ ಮನೆಯಲ್ಲಿ ಪೂಜೆ ನಡೆದು, ಇಮಚೇನಹಳ್ಳಿ, ಇಮಚೇನಹಳ್ಳಿ ಪಾಳ್ಯ, ಶಾಂತೇಗೌಡನ ಪಾಳ್ಯ, ಅಯ್ಯನತೋಟ ಗ್ರಾಮಗಳಿಗೆ ಹೋಗಿ ದೇವಾಲಯಗಳು ಹಾಗೂ ಮನೆ ಮನೆಗಳಲ್ಲಿ ಪೂಜೆ ಮಾಡಿ ಸಲಾಗುತ್ತದೆ. ರಾತ್ರಿ ಗೋವಿಂದಪುರದ ಪಟಾಲಮ್ಮ ದೇವಿಯ ಉಪಾಹಾರಕ್ಕೆ ಮಾರಮ್ಮ ದೇವಿಯನ್ನು ಕರೆದೊಯ್ಯಲಾಗುತ್ತದೆ.

ಐದು ದಿನ ಮಡ್ಲಕ್ಕಿ ಕಟ್ಟಿಸಿಕೊಂಡು ಪೂಜೆ ಮಾಡಿಸಿಕೊಳ್ಳುವ ಮಾರಮ್ಮನಿಗೆ ಮಂಗಳವಾರದಂದು ಎಲ್ಲಾ ಹಳ್ಳಿಗಳ ಜನರು ತಂಬಿಟ್ಟಿನ ಆರತಿ ಮಾಡುತ್ತಾರೆ. ದೇವಾಲಯದ ಮುಂದೆ ಕೊಂಡ ಹಾಕಲಾಗುತ್ತದೆ. ಹೆಂಗೆಳೆಯರು ಕೊಂಡದಲ್ಲಿ ಆರತಿ ತೆಗೆದುಕೊಂಡು ಹೋಗುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-4-1374028050

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.