ದಾಬಸ್ ಪೇಟೆ: ಬಿಸಿಲ ಝಳ ಹೆಚ್ಚಾದಂತೆ ನೆಲಮಂಗಲ ತಾಲ್ಲೂಕಿನ ಉದ್ದಕ್ಕೂ ಮಾವಿನ ಮರಗಳಲ್ಲಿ ಕಾಯಿಗಳು ಉದುರುತ್ತಿದ್ದು, ಫಸಲು ಕಡಿಮೆಯಾಗುವ ಆತಂಕ ರೈತರನ್ನು ಕಾಡುತ್ತಿದೆ.

ತಾಲ್ಲೂಕಿನಲ್ಲಿ 1,250 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಮರಗಳಿವೆ. ಈ ಬಾರಿ ಉತ್ತಮ ಹೂ ಬಿಟ್ಟು 6,500 ಟನ್ ಮಾವಿನ ನಿರೀಕ್ಷೆ ಇತ್ತು. ಬಿಸಿಲ ತಾಪ ಹೆಚ್ಚಾದ್ದರಿಂದ ಕಾಯಿಗಳು ಉದುರಲು ಆರಂಭಿಸಿವೆ. ಈ ವರ್ಷ ಬಿಸಿಲ ತಾಪ ಅಧಿಕವಾಗಿದ್ದು, ಕಾಯಿಗಳು ಬತ್ತಿ ನೆಲಕ್ಕೆ ಉದುರುತ್ತೀವಿ ಎಂದು ರೈತ ತ್ಯಾಗರಾಜು ಕಳವಳ ವ್ಯಕ್ತಪಡಿಸಿದರು.

ಐದಾರು ತಿಂಗಳಿನಿಂದ ಮಳೆ ಇಲ್ಲದೆ ಬಿರು ಬಿಸಿಲಿನಿಂದ ಮಾವಿನ ಕಾಯಿ ಸಣ್ಣದಾಗಿವೆ. ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತದೋ ಇಲ್ಲವೋ ಎಂಬ ಆತಂಕವಿದೆ ಎಂದು ಮಾವಿನ ಬೆಳೆಗಾರ ರಾಮಯ್ಯ ಹೇಳಿದರು.

‘ವಾರ್ಷಿಕ ಆದಾಯದ ಮೂಲವಾಗಿದ್ದ ಮಾವಿನ ಬೆಳೆ ಬಿಸಿಲಿಗೆ ನೆಲಕ್ಕೆ ಬೀಳುತ್ತಿದ್ದು, ತೋಟದ ಫಸಲಿನ ಗುತ್ತಿಗೆ ವಹಿಸಿಕೊಂಡಿದ್ದ ವ್ಯಾಪಾರಸ್ಥರು ಫಸಲು ಕಡಿಮೆ, ಕಾಯಿ ಸಣ್ಣ ಎಂಬ ಕಾರಣಕ್ಕಾಗಿ ವ್ಯಾಪಾರ ಆದ ಬೆಲೆ ಕೊಡಲು ಹಿಂದೆ ಮುಂದೆ ನೋಡುತ್ತಿದ್ದಾರೆ’ ಎಂದು ರೈತ ಮಂಜುನಾಥ್ ಅಳಲು ತೋಡಿಕೊಂಡರು.

‘ಮಾವಿನ ಬೆಳೆಗೆ 25ರಿಂದ 28 ಡಿಗ್ರಿ ತಾಪಮಾನ ಇದ್ದರೆ ಸೂಕ್ತ. ಆದರೆ ಈ ಬಾರಿ ತಾಲ್ಲೂಕಿನಲ್ಲಿ 32ರಿಂದ 35 ಡಿಗ್ರಿ ಮೇಲೆ ತಾಪಮಾನ ಇದೆ. ಇದು ಮಾವಿನ ಇಳುವರಿ ಮೇಲೆ ಪರಿಣಾಮ ಬೀರಿದೆ’ ಎಂದು ತೋಟಗಾರಿಕಾ ಅಧಿಕಾರಿಗಳು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-4-1698395987

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.