ನೆಲಮಂಗಲ: ‘ಕಮಲ ಮತ್ತು ಕಪ್ಪೆ ಎರಡೂ ಕೆಸರಿನಲ್ಲಿಯೇ ಜನಿಸಿದರೂ ಕಮಲ ಶ್ರೀಕಮಲವನ್ನು ಸೇರುವುದು. ಸದ್ದು ಮಾಡುವ ಕಪ್ಪೆ ಕೆಸರಿನಲ್ಲಿಯೇ ಮಡಿಯುವುದು. ಕೆಸರಿಗೆ ಅಂಟಿಕೊಳ್ಳದ ಕಮಲದಂತೆ ಪೂರ್ಣಾನಂದ ಶ್ರೀ ಧರ್ಮಕ್ಕಾಗಿ ಸಮಾಜಕ್ಕಾಗಿ ತಮ್ಮನ್ನು ಸಮರ್ಪಿಸಿ ಕೊಂಡಿದ್ದಾರೆ’ ಎಂದು ಸ್ವಯಂ ಪ್ರಕಾಶ ಸಚ್ಚಿದಾನಂದ ಶ್ರೀ ಹೇಳಿದರು.

ನಗರೂರಿನ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದಲ್ಲಿ ಪೀಠದ 5ನೇ ವಾರ್ಷಿಕೋತ್ಸವ, ಅನ್ನದಾಸೋಹ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ರಾಜಕಾರಣಿಗಳು ಸ್ವಾರ್ಥಕ್ಕಾಗಿ, ಸಮಾಜವನ್ನು ಒಡೆದು ಆಳುವುದಕ್ಕಾಗಿ, ಹಿಂದುಳಿದವರು –ಮುಂದುವರಿದವರು ಎಂಬ ಕಂದಕ ಸೃಷ್ಟಿ ಮಾಡಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಅವರು ಕೊನೆಯ ಕ್ಷಣಗಳಲ್ಲಿ ಜಾತಿಗಣತಿಯನ್ನು ಸ್ವೀಕರಿಸಿ ಮುಂದಿನ ಸರ್ಕಾರವನ್ನು ಬಲಿಪಶುವಾಗಿಸಿದ್ದಾರೆ. ವೈಜ್ಞಾನಿಕ ವಲ್ಲದ ಇದನ್ನು ಯಾವುದೇ ಕಾರಣಕ್ಕೂ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ದೇವರಾಜ ಅರಸು ಅವರಂತೆ ಗಣತಿಯಲ್ಲಿ ಕ್ರಮ ಅನುಸರಿಸಿಲ್ಲ. ಕೇವಲ ಸ್ವಜಾತಿ ಪ್ರೇಮದಿಂದ ಗಾಣಿಗ, ಮಡಿವಾಳ, ಸವಿತಾ ಹಾಗೂ ಸಣ್ಣಪುಟ್ಟ ಸಮುದಾಯಗಳಿಗೆ ಅನ್ಯಾಯವಾಗಲಿದೆ’ ಎಂದರು.

ಕೈಲಾಸ ಆಶ್ರಮದ ಜಯೇಂದ್ರಪುರಿ ಶ್ರೀ, ವನಕಲ್ಲು ಮಠದ ಬಸವರಮಾನಂದ ಶ್ರೀ, ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಶ್ರೀ, ದಮ್ಮೂರು ಗೋವರ್ಧನ ನಂದಪುರಿ, ಕ್ಷತ್ರಿಯ ದಿವ್ಯಜ್ಞಾನಾನಂದಗಿರಿ, ತಿಗಳ ಪ್ರಣವಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು.

ಗಾಣಿಗರ ಹಬ್ಬದ ಪ್ರಯುಕ್ತ ರಿಯಾಯಿತಿ ದರದಲ್ಲಿ ಸೀರೆ ಮಾರಾಟ, ಕ್ರೀಡಾಸ್ಪರ್ಧೆ, ಪ್ರತಿಭಾ ಪುರಸ್ಕಾರ, ವಧುವರರ ಅನ್ವೇಷಣೆ, ಉಚಿತ ಆರೋಗ್ಯ ಶಿಬಿರ, ಕನ್ನಡಕ ವಿತರಣೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-4-1168731830

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.