ನೆಲಮಂಗಲ: ‘ಸೋಲೂರು ಹೋಬಳಿಯನ್ನು ಅಧಿಕೃತವಾಗಿ ನೆಲಮಂಗಲ ತಾಲ್ಲೂಕಿಗೆ ಸೇರಿಸುವುದಾಗಿ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿದ್ದೇನೆ. ಸೋಲೂರು ಹೋಬಳಿಯಲ್ಲಿ 10 ಸಾವಿರದಿಂದ 12 ಸಾವಿರ ಮನೆಗಳಿದ್ದು, ಮನೆ ಮನೆಗೂ ಸಿಹಿ ಹಂಚಿ ‘ಸೋಲೂರು ಸಂಭ್ರಮ’ ಆಚರಿಸಲಾಗುವುದು’ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ಸೋಲೂರು ಹೋಬಳಿಯನ್ನು ಅಧಿಕೃತವಾಗಿ ನೆಲಮಂಗಲ ತಾಲ್ಲೂಕಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚುನಾವಣಾ ಪೂರ್ವದಲ್ಲಿ ಜನರ ಸಮಸ್ಯೆಗಳನ್ನು ಆಲಿಸುವ ಸಂದರ್ಭದಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರ, ಮಾಗಡಿ ತಾಲ್ಲೂಕಿಗೆ ಸೇರಿದ್ದ ಸೋಲೂರಿನ ಜನತೆ ಆಡಳಿತಾತ್ಮಕವಾಗಿ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದರು. ಅಂದು ನಾಗರಿಕರಿಗೆ ನೀಡಿದ್ದ ಮಾತನ್ನು ಇಂದು ಉಳಿಸಿಕೊಳ್ಳಲಾಗಿದೆ’ ಎಂದರು.

‘ಸಚಿವ ರಾಮಲಿಂಗಾರೆಡ್ಡಿ ಅವರು, ಶಾಸಕ ಎನ್. ಶ್ರೀನಿವಾಸ್ ಅವರಿಂದ ಪ್ರಸ್ತಾವ ಸ್ವೀಕರಿಸಿ ಸಚಿವ ಸಂಪುಟದಲ್ಲಿ ಮಂಡಿಸಿ ಸೋಲೂರನ್ನು ನೆಲಮಂಗಲಕ್ಕೆ ಸೇರಿಸಿದ್ದಾರೆ’ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.

ರಾಮಲಿಂಗಾರೆಡ್ಡಿ ಮಾತನಾಡಿ, ‘ಸೋಲೂರಿನಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಜನತೆ ಸೋಲೂರನ್ನು ನೆಲಮಂಗಲಕ್ಕೆ ಸೇರಿಸುವ ಬಗ್ಗೆ ಕೇಳಿಕೊಂಡಿದ್ದರು. ಅದರಂತೆ ಶಾಸಕರು ವೇಗವಾಗಿ ಎಲ್ಲ ಇಲಾಖೆಗಳಲ್ಲೂ ಪ್ರಕ್ರಿಯೆ ನಡೆಯುವಂತೆ ನೋಡಿಕೊಂಡು, ಕಾರ್ಯಸಾಧುವಾಗಿಸಿಕೊಂಡಿದ್ದಾರೆ. ನೆಲಮಂಗಲದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ, ದಾಬಸ್ಪೇಟೆಯಲ್ಲೂ ಮುಕ್ಕಾಲು ಎಕರೆ ಜಾಗ ಗುರುತಿಸಿದ್ದು, ಶೀಘ್ರ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭ ಆಗಲಿದೆ. ನಮ್ಮ ಮೆಟ್ರೊ ಸಹ ಬರಲಿದೆ’ ಎಂದರು.

ಜಿಲ್ಲಾಧಿಕಾರಿ ಅನುರಾಧಾ ಮಾತನಾಡಿ, ‘ಸೋಲೂರು ಹೋಬಳಿಯಲ್ಲಿ 62 ಸಾವಿರ ಜನಸಂಖ್ಯೆ ಇದ್ದು, 68 ಕಂದಾಯ ಗ್ರಾಮ, 152 ಗ್ರಾಮಗಳು ಇದ್ದು, 15 ಸಾವಿರ ರೈತರಿದ್ದಾರೆ. ಒಂದು ವಾರದಲ್ಲಿ ಪಹಣಿ ಸೇರಿದಂತೆ ಎಲ್ಲ ದಾಖಲೆಗಳುನೆಲಮಂಗಲ ತಾಲ್ಲೂಕಿನ ಹೆಸರಿನಲ್ಲಿ ಬರಲಿವೆ, ಡಿಜಿಟಲೀಕರಣವಾಗಲಿವೆ’ ಎಂದರು.

ಉಪ ವಿಭಾಗಾಧಿಕಾರಿ ದುರ್ಗಾ, ತಹಶೀಲ್ದಾರ್ ಮಲ್ಲೇಶ್, ನಗರಸಭೆ ಅಧ್ಯಕ್ಷ ಗಣೇಶ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ಎಂ.ನಾರಾಯಣಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತರಾಜು, ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-4-2084766685

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.