ನೆಲಮಂಗಲ: ಪಟ್ಟಣದ ಸೊಂಡೆಕೊಪ್ಪ ಮತ್ತು ಅರಿಶಿನಕುಂಟೆ ಅಂಡರ್ ಪಾಸ್ ಬಳಿಯ ಬೈಪಾಸ್ (ನೆಲಮಂಗಲ ಪಟ್ಟಣದ ಪ್ರವೇಶ) ಬಳಿ ನಿತ್ಯ ಸಂಚಾರ ದಟ್ಟಣೆ, ಅಪಘಾತ, ವಾಗ್ಯುದ್ಧಗಳು ನಿತ್ಯವೂ ನಡೆಯುತ್ತಿವೆ.

ಸಣ್ಣ ಪ್ರಮಾಣದ ಮಳೆಯಾದರೂ ಗಂಟೆಗಟ್ಟಲೆ ವಾಹನ ದಟ್ಟಣೆ ಉಂಟಾಗಿ ನರಕ ಯಾತನೆ ಅನುಭವಿಸ ಬೇಕಾಗುತ್ತದೆ. ಇದರಿಂದ ಮುಕ್ತಿಗಾಗಿ ಎರಡು ಕಡೆ ಸಿಗ್ನಲ್ ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಳೆಯಿಂದ ಅಂಡರ್ ಪಾಸ್ ಆಶ್ರಯ ಬಯಸಿ, ತುರ್ತು ನಿರ್ಗಮಿಸುವ ಕಡೆ ನಿಲ್ಲುವುದರಿಂದ ಸಂಚಾರದಟ್ಟಣೆ ಉಂಟಾಗಿ ಹೆದ್ದಾರಿಯ ಎರಡು ಕಡೆ ವಾಹನಗಳು ಗಂಟೆಗಟ್ಟಲೆ ನಿಲ್ಲುವಂತಾಗಿದೆ. ಬೆಳಗಿನ ಶಾಲಾ ಅವಧಿ (7.30ರಿಂದ 9.30) ಮತ್ತು ಸಂಜೆ 6ರಿಂದ ರಾತ್ರಿ 8ರವರೆಗೆ ಸಂಚಾರ ಪೊಲೀಸರನ್ನು ಕಡ್ಡಾಯವಾಗಿ ಕರ್ತವ್ಯಕ್ಕೆ ನಿಯೋಜಿಸಲು ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ.ಸಿದ್ದರಾಜು ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

‘ಅರಿಶಿನಕುಂಟೆ ಅಂಡರ್ ಪಾಸ್ ಮತ್ತು ಸೊಂಡೆಕೊಪ್ಪ ಕ್ರಾಸ್ ಬಳಿ ನಿತ್ಯ ಮೂರು ನಾಲ್ಕು ಪ್ರತಿಷ್ಠೆಯ ಒಣ ಜಗಳಗಳು, ವಾಹನಗಳು ಅಡ್ಡಾದಿಡ್ಡಿ ನುಗ್ಗುವುದರಿಂದ ಅಪಘಾತ ಗಳು ಸಂಭವಿಸುತ್ತಿರುತ್ತವೆ. ನಮ್ಮ ಜನಕ್ಕೆ ಪೊಲೀಸರೇ ಹೇಳಬೇಕಾದ ಅನಿವಾರ್ಯವಿದೆ. ಯಾವುದೇ ನಿರ್ಬಂಧಗಳಿಲ್ಲದೆ ಅನುಕೂಲ ಸಿಂಧುವಾಗಿ ನುಗ್ಗುವುದರಿಂದ ದಟ್ಟಣೆ ಉಂಟಾಗುತ್ತದೆ. ನುಗ್ಗುವ ಭರದಲ್ಲಿ ವಾಹನಗಳು ಒಂದಕ್ಕೊಂದು ತಗುಲಿ ಸಂಘರ್ಷಗಳಾಗುತ್ತವೆ. ಇದನ್ನು ತಪ್ಪಿಸಲು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಪೊಲೀಸರನ್ನು ನಿಯೋಜಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.