ಶನಿವಾರ, ಡಿಸೆಂಬರ್ 7, 2019
22 °C

ಹೊಸಕೋಟೆಗೆ ನೂತನ ತಹಶೀಲ್ದಾರ್ ಗೀತಾ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ಇಲ್ಲಿನ ತಹಶೀಲ್ದಾರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೆ. ರಮೇಶ್ ಅವರ ಬದಲಿಗೆ ನೂತನವಾಗಿ ಗೀತಾ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ.

ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಗೀತಾ ಅವರು, ‘2014ರ ಬ್ಯಾಚ್ ನಲ್ಲಿ  ಆಯ್ಕೆಯಾಗಿದ್ದು ಇದು ನನ್ನ ಎರಡನೆ ಕಾರ್ಯಕ್ಷೇತ್ರವಾಗಿದೆ. ಹಿಂದೆ ಮದ್ದೂರಿನಲ್ಲಿ ಕೆಲಸ ಮಾಡಿದ್ದೇನೆ. ಸರ್ಕಾರಿ ಜಮೀನುಗಳನ್ನು ಉಳಿಸುವುದು ಹಾಗೂ ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡುವುದು ನನ್ನ ಆದ್ಯತೆ. ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)