ಅಂಧರ ಸಂಸ್ಥೆಯಲ್ಲಿ ಹೊಸ ವರ್ಷ ಆಚರಣೆ

7

ಅಂಧರ ಸಂಸ್ಥೆಯಲ್ಲಿ ಹೊಸ ವರ್ಷ ಆಚರಣೆ

Published:
Updated:
Prajavani

ವಿಜಯಪುರ: ಜೇಸಿಐ ಪದಾಧಿಕಾರಿಗಳು ಇಲ್ಲಿನ ಕರ್ನಾಟಕ ಅಭ್ಯುದಯ ಸಂಸ್ಥೆಯ ಆವರಣದಲ್ಲಿನ ಅಂಧ ಮಕ್ಕಳ ಜತೆ ಹೊಸ ವರ್ಷ ಆಚರಣೆ ಮಾಡಿದರು.

ಜೇಸಿಐ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ‘ಹೊಸ ವರ್ಷವನ್ನು ಅಂಧ ಮಕ್ಕಳೊಟ್ಟಿಗೆ ಸರಳವಾಗಿ ಆಚರಿಸುತ್ತಿದ್ದೇವೆ. ಸಂಘ ಸಂಸ್ಥೆಗಳು ಇಂತಹ ಸಂಸ್ಥೆಗಳನ್ನು ಗುರ್ತಿಸಿ, ಅವರಲ್ಲಿ ನಾವಿದ್ದೇವೆ ಎನ್ನುವ ಆತ್ಮ ವಿಶ್ವಾಸ ತುಂಬಬೇಕು. ಆಗ ಅವರಲ್ಲಿ ಹೊಸ ಹುರುಪು ಆರಂಭವಾಗುತ್ತದೆ. ಸಮಾಜದಲ್ಲಿ ಹುಟ್ಟಿದ ನಾವು ಸಮಾಜದಿಂದ ಏನು ಪಡೆದಿದ್ದೇವೆ ಎನ್ನುವುದಕಿಂತ ಸಮಾಜಕ್ಕೆ ನಮ್ಮ ಕೊಡುಗೆಯೇನು ಎನ್ನುವುದು ಮುಖ್ಯವಾಗುತ್ತದೆ’ ಎಂದರು.

ಸಂಸ್ಥೆಯ ಸಂಚಾಲಕ ಜನಾರ್ಧನಮೂರ್ತಿ ಮಾತನಾಡಿ, ‘ಪ್ರೀತಿ, ಸ್ನೇಹ ಹಾಗೂ ಸೌಹಾರ್ದತೆಯಿಂದ ಬದುಕಿ ಬಾಳುವಂತಹ ಬೆಳಕನ್ನು ನಮ್ಮೊಳಗೆ ಮೂಡಿಸಿಕೊಂಡರೆ ಉತ್ತಮ ಸಮಾಜ ತಾನಾಗಿಯೇ ನಿರ್ಮಾಣವಾಗುತ್ತದೆ. ಕೆಟ್ಟ ಹವ್ಯಾಸ ದೂರವಾಗಿ ಜ್ಞಾನದ ಅರಿವು, ಪ್ರೀತಿ, ಸದಾಚಾರದ ಬೆಳಕು ಮೂಡಿಸುವಂತಹ ಕೆಲಸ ಸಂಘ, ಸಂಸ್ಥೆಗಳಿಂದ ಸಾಧ್ಯವಾಗುತ್ತದೆ. ವಿದ್ಯಾ ಸಂಸ್ಥೆಗಳು ಮಕ್ಕಳಿಗೆ ಪಾಠದ ಜತೆಗೆ ಮಾನವೀಯ ಮೌಲ್ಯ ಹಾಗೂ ಉತ್ತಮ ಸಂಸ್ಕಾರ ರೂಢಿಸುವ ಕೆಲಸ ಮಾಡಬೇಕಾಗಿದೆ’ ಎಂದರು.

ಸಿಹಿ ಹಂಚಲಾಯಿತು. ನಿಕಟಪೂರ್ವ ಅಧ್ಯಕ್ಷ ನಾಗೇಶ್, ಪದಾಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !