ಶುಕ್ರವಾರ, ನವೆಂಬರ್ 15, 2019
21 °C

ನಾಯಕರೇ ಇಲ್ಲದ ಕಾಂಗ್ರೆಸ್‌ ಪಕ್ಷ: ಎಂಟಿಬಿ ನಾಗರಾಜು ವ್ಯಂಗ್ಯ

Published:
Updated:
Prajavani

ಹೊಸಕೋಟೆ: ‘ದೇಶದಲ್ಲಿ ಕಾಂಗ್ರೆಸ್‌ಗೆ ಬೆಲೆಯಿಲ್ಲ, ನಾಯಕರೂ ಇಲ್ಲ. ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದಾರೆ. ತಾತ್ಕಾಲಿಕವಾಗಿ ಸೋನಿಯಾ ಗಾಂಧಿ ಇದ್ದಾರೆ’ ಎಂದು ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನರೆಂದ್ರ ಮೋದಿಯವರ ವಿರುದ್ದ ಯಾವುದೇ ಪಕ್ಷಗಳು ಏನು ಮಾಡಲು ಸಾಧ್ಯವಿಲ್ಲ. ದೇಶದಲ್ಲಿರುವ ಎಲ್ಲ ಭ್ರಷ್ಟ ಅಧಿಕಾರಿಗಳಿಗೂ ಶಿಕ್ಷಯಾಗಬೇಕು. ಮೋದಿಯವರ ಜನಪ್ರಿಯ ಕೆಲಸಗಳ ಮುಂದೆ ಯಾವುದೇ ರಾಜಕೀಯ ಪಕ್ಷ ತಲೆ ಎತ್ತುವುದಿಲ್ಲ’ ಎಂದರು.

‘ಕಾಂಗ್ರೆಸ್ ಪಕ್ಷವನ್ನು ಅದರ ಮುಖಂಡರೇ ಮುಗಿಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಅವರಿಂದ ಉಳಿಸಿಕೊಳ್ಳಲಾಗಲಿಲ್ಲ. ಸಿದ್ದರಾಮಯ್ಯ ಅವರೇ ತಮ್ಮ ಕೆಲಸಗಳನ್ನು ಕುಮಾರಸ್ವಾಮಿಯವರ ಬಳಿ ಮಾಡಿಸಿಕೊಳ್ಳಲಾಗಲಿಲ್ಲ. ಇನ್ನು ನಮ್ಮ ಕೆಲಸವನ್ನು ಕುಮಾರಸ್ವಾಮಿ ಹೇಗೆ ಮಾಡಿಕೊಡುತ್ತಿದ್ದರು. ಅದಕ್ಕೇ ಬೇಸತ್ತು ನಾನು ರಾಜಿನಾಮೆ ನೀಡಿದ್ದೇನೆ. ಈಗ ನಾನು ಎಲ್ಲಿ ಬೇಕಾದರೂ ಹೋಗಬಹುದು. ಕೇಳಲು ಅವರಿಗೆ ಅಧಿಕಾರವಿಲ್ಲ’ ಎಂದರು.

ಪ್ರತಿಕ್ರಿಯಿಸಿ (+)