ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ: ಆಮ್ಲಜನಕ ಬ್ಯಾಂಕ್ ಕಾರ್ಯಾರಂಭ

ಜೈನ್‌ ಸಂಸ್ಥೆಯಿಂದ ಜನ ಸೇವೆ
Last Updated 3 ಜೂನ್ 2021, 4:17 IST
ಅಕ್ಷರ ಗಾತ್ರ

ಹೊಸಕೋಟೆ: ಕೊರೊನಾ ಸೋಂಕಿ ನಿಂದ ಗುಣಮುಖರಾಗಿ ಹೊರಬಂದ ಕೆಲವರಿಗೆ ಅನಿವಾರ್ಯವಾಗಿ ಕೆಲವು ದಿನಗಳ ಕಾಲ ಆಮ್ಲಜನಕ ಸಾಂದ್ರಕದ ಅವಶ್ಯಕತೆ ಇರುತ್ತದೆ. ವೈದ್ಯರು ಕೂಡ ಅವರಿಗೆ ಈ ಸಲಹೆ ನೀಡಿ ಮನೆಗೆ ಕಳುಹಿಸುತ್ತಾರೆ. ಆದರೆ, ಆರ್ಥಿಕ ಸಾಮರ್ಥ್ಯ ಇಲ್ಲದವರು ಸಾಂದ್ರಕ ತೆಗೆದುಕೊಳ್ಳಲು ಆಗುವುದಿಲ್ಲ. ಅಂತಹವರಿಗೆ ಭಾರತೀಯ ಜೈನ್ ಸಂಸ್ಥೆ ಸಹಾಯ ಮಾಡಲಿದೆ ಎಂದು ಸಂಸ್ಥೆಯ ಸದಸ್ಯ ದೀಪಕ್ ಜೈನ್ ತಿಳಿಸಿದರು.

ನಗರದ ಜೀವದಯಾ ಗೋಶಾಲೆಯಲ್ಲಿ ಆಮ್ಲಜನಕ ಬ್ಯಾಂಕ್ ಪ್ರಾರಂಭಿಸಿ ಅವರು ಮಾತನಾಡಿದರು.

ಮನೆಗಳಲ್ಲಿಯೇ ಆಮ್ಲಜನಕ ಸಾಂದ್ರಕದ ಅವಶ್ಯಕತೆ ಇರುವವರಿಗೆ ವಿಶೇಷವಾಗಿ ಹಿಂದುಳಿದವರಿಗೆ ಸಂಸ್ಥೆಯಿಂದ ಆಮ್ಲಜನಕ ಸಾಂದ್ರಕ ನೀಡಲಾಗುತ್ತದೆ. ಅವರು ಅದನ್ನು ಉಪಯೋಗಿಸಿ ನಮಗೆ ವಾಪಸ್ ನೀಡಬೇಕು. ಅದಕ್ಕೆ ಪ್ರಾರಂಭದಲ್ಲಿ ₹ 5,000 ಮುಂಗಡ ನೀಡಬೇಕು. ಯಂತ್ರ ವಾಪಸ್ ನೀಡಿದ ನಂತರ ಅವರ ಹಣವನ್ನು ಪೂರ್ತಿಯಾಗಿ ವಾಪಸ್ ನೀಡಲಾಗುತ್ತದೆ ಎಂದು
ಹೇಳಿದರು.

ಯಂತ್ರಕ್ಕೆ ದಿನಕ್ಕೆ ಕೇವಲ ₹ 100 ಬಾಡಿಗೆ ಪಡೆಯಲಾಗುತ್ತದೆ ಎಂದ ಅವರು, ತಾಲ್ಲೂಕಿನ ಜನತೆ ಇದರ ಸದುಪಯೋಗ ಪಡೆಯಬೇಕು. ಆಮ್ಲಜನಕದ ಕೊರತೆಯಿಂದ ಯಾರಿಗೂ ಸಮಸ್ಯೆಯಾಗಬಾರದೆಂದು ಭಾರತೀಯ ಜೈನ್ ಸಂಸ್ಥೆ ಈ ಯೋಜನೆ ರೂಪಿಸಿದೆ ಎಂದು
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT