ಹೊಸತಡಕಿನ ಸವಿಯಲ್ಲಿ ಮಿಂದೆದ್ದ ಜನರು

ಗುರುವಾರ , ಏಪ್ರಿಲ್ 25, 2019
21 °C

ಹೊಸತಡಕಿನ ಸವಿಯಲ್ಲಿ ಮಿಂದೆದ್ದ ಜನರು

Published:
Updated:
Prajavani

ವಿಜಯಪುರ: ಯುಗಾದಿ ಮುಗಿದ ಮಾರನೇ ದಿನ ಆಚರಣೆ ಮಾಡುವ ಹೊಸತಡಕು ಆಚರಣೆಗೆ ಮಾಂಸ, ಮದ್ಯ ಖರೀದಿಗೆ ಜನರು ಭಾನುವಾರ ಮುಗಿಬಿದ್ದರು.

ನಗರದಲ್ಲಿನ ಮಾಂಸದ ಅಂಗಡಿಗಳನ್ನು ಶನಿವಾರ ರಾತ್ರಿಯೇ ವಿದ್ಯುತ್ ದೀಪಗಳು, ಮಾವಿನ ಸೊಪ್ಪಿನಿಂದ ಸಿಂಗಾರ ಮಾಡಿಕೊಂಡಿದ್ದ ಮಾಂಸ ಮಾರಾಟದ ವ್ಯಾಪಾರಸ್ಥರು, ರಾತ್ರಿ ಒಂದು ಗಂಟೆಯಿಂದಲೇ ಮಾರಾಟದಲ್ಲಿ ತೊಡಗಿದ್ದರು.

ಮದ್ಯ ಮಾರಾಟದ ಮಳಿಗೆಗಳ ಬಳಿಯಲ್ಲೂ ವಿದ್ಯುತ್ ದೀಪಾಲಂಕಾರ ಕಂಗೊಳಿಸುತ್ತಿತ್ತು. ಮಾಂಸದ ಅಂಗಡಿಗಳ ಮುಂದೆ ಕಿಕ್ಕಿರಿದು ನಿಂತು ಮಾಂಸ ಖರೀದಿಸಿದರು.

ಹಳ್ಳಿಗಳಲ್ಲಿ ಮಾಂಸದೂಟವನ್ನು ಸವಿದ ಜನರು ಹೊಂಗೆ ಮರಗಳಿಗೆ ಹಗ್ಗಗಳನ್ನು ಕಟ್ಟಿ ಜೋಕಾಲಿ ಆಡುತ್ತಿದ್ದರೆ, ಅರಳೀಕಟ್ಟೆಗಳ ಮೇಲೆ ಘಟ್ಟಮನೆ ಆಟ, ಚೌಕಾಬಾರ, ಒಂಟಿ ಚೆಕ್ಕಾ, ಗೋಲಿ ಆಟಗಳಲ್ಲಿ ದೊಡ್ಡವರಾದಿಯಾಗಿ ಮಕ್ಕಳು ತೊಡಗಿಸಿಕೊಂಡು ದಿನ ಕಳೆದರು.

ಹಬ್ಬದ ಪ್ರಯುಕ್ತ ಮಾಂಸಕ್ಕೆ ಹೆಚ್ಚು ಬೇಡಿಕೆಯಿತ್ತು. ಕುರಿಮಾಂಸ ಕೆ.ಜಿ.ಗೆ ₹ 500ಕ್ಕೆ ಮಾರಾಟವಾಯಿತು. ಕೋಳಿ ಮಾಂಸ ಒಂದು ಕೆ.ಜಿ.ಗೆ ₹ 180 ಕ್ಕೆ ಮಾರಾಟವಾಗುತ್ತಿತ್ತು. ತಂಪುಪಾನೀಯಗಳು ಕೂಡಾ ದುಬಾರಿಯಾಗಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !