ಮಂಗಳವಾರ, ಮೇ 17, 2022
24 °C

ಫಾಸ್ಟ್ಯಾಗ್‌ನಿಂದ ಜನರ ಪರದಾಟ; ಸರ್ಕಾರದ ವಿರುದ್ಧ ಚಾಲಕರು, ಸಾಮಾನ್ಯ ಜನರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಲ್ ಗೇಟ್ ನಲ್ಲಿ ಸಾಲುಗಟ್ಟಿರುವ ಕ್ಯಾಬ್ ಗಳು

ದೇವನಹಳ್ಳಿ: ಸೋಮವಾರ ಮಧ್ಯರಾತ್ರಿಯಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ ಫಾಸ್ಟ್ಯಾಗ್‌ ಜಾರಿ ಮಾಡಿರುವುದರಿಂದ ವಾಹನ ಚಾಲಕರ ಮತ್ತು ಟೋಲ್ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು.

ಕೇಂದ್ರ ಸರ್ಕಾರ 2021 ಜ 1ರಿಂದ ದೇಶಾದ್ಯಂತ ಇರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಂಕವಸೂಲಿ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್‌ ಜಾರಿಗೊಳಿಸಿ ಫೆ.15ರಿಂದ ಕಡ್ಡಾಯವಾಗಿ ಜಾರಿಗೊಳಿಸಲು ಸೂಚನೆ ನೀಡಿತ್ತು.

ಇಲ್ಲಿನ ಸಾದಹಳ್ಳಿ ಗೇಟ್ ಬಳಿಯ  ರಾಷ್ಟ್ರೀಯ ಹೆದ್ದಾರಿ 7ರ ಟೋಲ್ ಗೇಟ್ ಬಳಿ ಫಾಸ್ಟ್ಯಾಗ್‌ ಅಳವಡಿಸದ ಮತ್ತು ನವೀಕರಣ ಮಾಡಿಸದೆ ಇರುವ ವಾಹನ ಚಾಲಕರಿಂದ ಟೋಲ್ ಸಿಬ್ಬಂದಿ ಒಂದು ಕಾರಿಗೆ ₹95ರ ಬದಲು ₹190 ವಸೂಲಿಗೆ ಮುಂದಾದ ಪರಸ್ಪರ ವಾಗ್ವಾದ ನಡೆಯಿತು.

ಕೆಲ ಚಾಲಕರು ದುಪ್ಪಟ್ಟು ಹಣ ನೀಡಿ ದಾಟಿದರೆ ಮತ್ತೆ ಕೆಲವರು ಆಕ್ರೋಶದಿಂದ ತಮ್ಮ ವಾಹನಗಳು ಹಿಂದಕ್ಕೆ ಪಡೆದು ಹೊರಟರು. ಮಧ್ಯರಾತ್ರಿಯಿಂದ ಈವರೆಗೆ ಸಂಚಾರ ಮಾಡಿರುವ ಶೇ75 ರಷ್ಟು ವಾಹನಗಳಿಗೆ ಫಾಸ್ಟ್ಯಾಗ್‌ ಅಳವಡಿಸಿಲ್ಲ. ಅಳವಡಿಸಿಕೊಂಡಿರುವ ಫಾಸ್ಟ್ಯಾಗ್‌ಗೆ ನವೀಕರಣ ಮಾಡಿಸಿಕೊಂಡಿಲ್ಲ. ಕೆಲ ಚಾಲಕರ ಖಾತೆಯಲ್ಲಿ ಹಣವೇ ಇಲ್ಲ. ಸರ್ಕಾರದ ಆದೇಶದಂತೆ ಕೆಲಸ ಮಾಡು
ತ್ತಿದ್ದೇವೆ ಎಂದು ಟೋಲ್ ಸಿಬ್ಬಂದಿ ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.

ಫಾಸ್ಟ್ ಟ್ಯಾಗ್‌ ಕಡ್ಡಾಯ ನೆಪದಲ್ಲಿ ಕೇಂದ್ರ ಸರ್ಕಾರ ಗುತ್ತಿಗೆ ಕಂಪನಿ|ಗಳೊಂದಿಗೆ ಶಾಮೀಲಾಗಿದೆ. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ನೋಟು ಅಮಾನ್ಯೀಕರಣ, ಕೇಂದ್ರ ಸರ್ಕಾರ ಮಧ್ಯರಾತ್ರಿಯಿಂದ ಜಾರಿಗೊಳಿಸುವ ಯೋಜನೆಗಳು. ಇದರ ಜತೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಮಧ್ಯರಾತ್ರಿಯಲ್ಲೇ ಆಪರೇಷನ್ ಕಮಲದ ಕಾರ್ಯ ಚಟುವಟಿಕೆ ನಡೆದಿದೆ. ಇದೊಂದು ಲಜ್ಜೆಗೆಟ್ಟ ಸರ್ಕಾರ ಎಂದು ಕಾರು ಮಾಲೀಕ ಭುವನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಮೂರು ವರ್ಷಗಳಲ್ಲಿ ಮೂರು ಬಾರಿ ಟೋಲ್ ಸುಂಕ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆ ನಿರಂತರವಾಗಿದೆ. ಲಾಕ್ ಡೌನ್ ನಿಂದ ಕಳೆದ 10 ತಿಂಗಳಿಂದ ಕೆಲಸವಿಲ್ಲ ಕಾರು ಚಾಲಕ ರಹಮತ್ ಉಲ್ಲಾಖಾನ್ ತಮ್ಮ ಅಳಲು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು