ರಸ್ತೆ ಸುರಕ್ಷಿತ ನಿಯಮ ಪಾಲಿಸಿ

7

ರಸ್ತೆ ಸುರಕ್ಷಿತ ನಿಯಮ ಪಾಲಿಸಿ

Published:
Updated:
Prajavani

ದೊಡ್ಡಬಳ್ಳಾಪುರ: ವಾಹನ ಚಾಲನಾ ಪರವಾನಗಿ ಹೊಂದಿದ್ದರಷ್ಟೇ ಸಾಲದು. ವಾಹನ ಚಲಾವಣೆ ಮಾಡುವಾಗ ಅನುಸರಿಸಬೇಕಾದ ಮುಂಜಾಗ್ರತೆ ಹಾಗೂ ರಸ್ತೆ ಸುರಕ್ಷತಾ ನಿಯಮ ಪಾಲಿಸುವುದು ಮುಖ್ಯ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಸಾರಿಗೆ ಇಲಾಖೆಯಿಂದ ರಸ್ತೆ ಸುಕ್ಷತಾ ಸಪ್ತಾಹದ ಅಂಗವಾಗಿ ನಡೆದ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುನ್ನೆಚ್ಚರಿಕೆ ವಹಿಸಿದರೆ ಅಪಘಾತ ತಡೆಗಟ್ಟಬಹುದು. ಸಂಚಾರ ನಿಯಮ ಪಾಲಿಸುವುದು ಸುರಕ್ಷತೆಗೆ ಅತಿ ಅವಶ್ಯ ಎಂದರು.

ಸಹಾಯಕ ಸಾರಿಗೆ ಅಧಿಕಾರಿ ಮಂಜುನಾಥ್ ಮಾತನಾಡಿ, ಮೋಟಾರು ವಾಹನ ಕಾಯ್ದೆ 1988ರನ್ವಯ ರಸ್ತೆಯಲ್ಲಿ ಚಲಿಸುವ ವಾಹನ ಸವಾರರು ಹಾಗೂ ಪಾದಚಾರಿಗಳು ನಿಯಮ ಪಾಲಿಸಬೇಕಿದೆ. ರಸ್ತೆ ಸುರಕ್ಷತೆಯಲ್ಲಿ ಚಾಲಕನ ಕರ್ತವ್ಯ ಕುರಿತಂತೆ ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಭುದೇವ್, ಉಪಾಧ್ಯಕ್ಷೆ ಜಯಲಕ್ಷ್ಮಿನಟರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !