ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆಗಳಿಗೆ ಪಾಲಿಷ್,‌ ಬದುಕಿಗಲ್ಲ: ಸಂಕಷ್ಟದಲ್ಲಿ ನೇಕಾರಿಕೆ

ನೇಕಾರಿಕೆ ಉದ್ಯಮದ ಒಂದು ಭಾಗವಾಗಿ ಗುರುತಿಸಿ * ಸರ್ಕಾರದ ಸೌಲಭ್ಯ ನೀಡಿ
Last Updated 1 ಜೂನ್ 2020, 1:53 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಪ್ರತಿದಿನ ಎರಡೂವರೆ ಸಾವಿರ ಸೀರೆಗಳನ್ನು ಪಾಲಿಷ್‌ ಮಾಡಿ ಮಾರಾಟಕ್ಕೆ ಸಿದ್ಧಗೊಳ್ಳುಸುತ್ತಿದ್ದೇವು. ಆದರೆ, ಲಾಕ್‌ಡೌನ್‌ ಜಾರಿಯಾದ ನಂತರ ದಿನಕ್ಕೆ 100 ಸೀರೆಗಳು ಸಹ ಪಾಲಿಷ್‌ಗೆ ಬರುತ್ತಿಲ್ಲ ಎಂದು ಕೊರೊನಾದಿಂದ ಉಂಟಾದ ಕೆಲಸದ ಏರು–ಪೇರು‘ ಬಗ್ಗೆಉದ್ಯಮಿ ಡಿ.ಜಿ.ಪ್ರಕಾಶ್‌ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ 25 ಸಾವಿರ ವಿದ್ಯುತ್‌ ಮಗ್ಗಗಳಷ್ಟೇ ಅಲ್ಲದೆ ಹಿಂದೂಪುರ, ಧರ್ಮಾವರಂ ನಗರದಿಂದಲೂ ಸಹ ನೇಕಾರರು ಸೀರೆಗಳನ್ನು ಪಾಲಿಷ್‌ ಮಾಡಿಸಿಕೊಂಡು ಹೋಗಲು ಇಲ್ಲಿಗೆ ಬರುತ್ತಿದ್ದರು. ವಿದ್ಯುತ್‌ ಮಗ್ಗದಿಂದ ಸೀರೆ ಹೊರ ಬಂದ ನಂತರ ಅದನ್ನು ಅತ್ಯಂತ ಅಚ್ಚುಕಟ್ಟಾಗಿ ಪಾಲಿಷ್‌ ಮಾಡಿ ಗ್ರಾಹಕರನ್ನು ಆಕರ್ಷಿಸುವಂತೆ ಮಾಡುವ ಕುಶಲತೆ ಇಲ್ಲಿನ ಕಾರ್ಮಿಕರಿಗೆ ಕರಗತವಾಗಿದೆ ಎನ್ನುತ್ತಾರೆ ಸುಮಾರು 15 ವರ್ಷಗಳಿಂದಲೂ ಸೀರೆ ಪಾಲಿಷ್‌ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಮಂಜುನಾಥ್‌.

‘ಉತ್ತವನ ಹೊಲ, ಬಿತ್ತಿದವನು ಕೆಡಸಿದ’ ಎನ್ನುವ ಗಾದೆಯಂತೆ ನೇಕಾರಿಕೆ ಕೊನೆಯ ಹಂತದ ಕೆಲಸವಾಗಿರುವ ಸೀರೆ ಪಾಲಿಷ್‌ನಲ್ಲಿ ಸ್ವಲ್ಪ ಮೈಮರೆತರೂ ಇಡೀ ನೇಕಾರರ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಲಿದೆ. ಗ್ರಾಹಕರನ್ನು ಸೆಳೆಯುವಂತೆ ಪಾಲಿಷ್‌ ಮಾಡಿದರಷ್ಟೇ ಸೀರೆಗೆ ಬೇಡಿಕೆ.

ಸೀರೆ ಪಾಲಿಷ್‌ ಮಾಡಲು ಈಗ ಸಾಕಷ್ಟು ಆಧುನಿಕ ಯಂತ್ರಗಳು ಬಂದಿವೆ. ಯಂತ್ರಗಳನ್ನು ಖರೀದಿಸಲು ಯಾರು ಬೇಕಿದ್ದರೂ ಬಂಡವಾಳ ಹಾಕುತ್ತಾರೆ. ಆದರೆ, ಕಾರ್ಮಿಕರನ್ನೇ ನಂಬಿ ಕೆಲಸ ಮಾಡಿಸುವುದು ಕಷ್ಟ. ಇಡೀ ಪಾಲಿಷ್‌ ಪ್ರಕ್ರಿಯೆ ಕೆಲಸ ತಿಳಿದಿರಬೇಕು. ಅಲ್ಲದೆ ಸ್ವತಃ ನಾವೇ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಹೀಗಾಗಿಯೇ ಸೀರೆ ಪಾಲಿಷ್‌ ಉದ್ಯಮ ನಡೆಸಲು ಕೆಲಸ ತಿಳಿಯದವರು ಯಾರೂ ಮುಂದಾಗುವುದಿಲ್ಲ. ಈ ಹಿಂದೆ ಬೆಂಗಳೂರು ಸಮೀಪದ ದೊಮ್ಮಲೂರು ಸುತ್ತಮುತ್ತ ಸಾಕಷ್ಟು ಸೀರೆ ಪಾಲಿಷ್‌ ಘಟಕಗಳು ಇದ್ದವು. ಈಗ ಇಲ್ಲದಾಗಿವೆ. ದೊಮ್ಮಲೂರಿನಲ್ಲಿ ಕೆಲಸ ಕಲಿತು ಬಂದಿರುವ ಮೂರು ಜನ ಸ್ನೇಹಿತರು ಮಾತ್ರ ನಗರದಲ್ಲಿ ಸೀರೆ ಪಾಲಿಷ್‌ ಮಾಡುವ ಘಟಕಗಳನ್ನು ಸ್ಥಾಪನೆ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಸೀರೆ ಪಾಲಿಷ್‌ ಮಾಡುವ ಘಟಕದಲ್ಲಿ ಮಹಿಳಾ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಮಹಿಳೆಯರಿಗೆ ಸೀರೆಗಳನ್ನು ಮಡಚುವ ಹಾಗೂ ಅವುಗಳನ್ನು ನೀಟಾಗಿ ಜೋಡಿಸುವ ಕಲೆ ಸಹಜವಾಗಿಯೇ ಬಂದಿರುವಂತಹದ್ದು. ಹೀಗಾಗಿಯೇ ದೈಹಿಕ ಶ್ರಮದ ಕೆಲಸಕ್ಕೆ ಮಾತ್ರ ಪುರುಷರು ಇರುತ್ತಾರೆ. ಉಳಿದ ಬಹುತೇಕ ಕೆಲಸವನ್ನು ಮಹಿಳೆಯರೇ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT