ಜನಸಂಖ್ಯೆ ದೇಶದ ಪ್ರಗತಿಗೆ ಮಾರಕ: ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ

7
ವಿಶ್ವ ಜನಸಂಖ್ಯೆ ದಿನಾಚರಣೆ

ಜನಸಂಖ್ಯೆ ದೇಶದ ಪ್ರಗತಿಗೆ ಮಾರಕ: ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ

Published:
Updated:
Deccan Herald

ದೇವನಹಳ್ಳಿ: ವಿಶ್ವದಲ್ಲಿ ಹೆಚ್ಚುತ್ತಿರುವ ಜನಸಂಖ್ಯಾ ಸ್ಫೋಟದ ಬೆಳೆವಣಿಗೆಯಿಂದ ಪ್ರಗತಿ ಹೊಂದುತ್ತಿರುವ ದೇಶಗಳಿಗೆ ಮಾರಕವಾಗುತ್ತಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ ಡಾ.ರವಿ ಪ್ರಕಾಶ್ ಅತಂಕ ವ್ಯಕ್ತಪಡಿಸಿದರು.

ಇಲ್ಲಿನ ಸರ್ಕರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಮತ್ತು ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಸಹಭಾಗಿತ್ವದಲ್ಲಿ ನಡೆದ ವಿಶ್ವ ಜನಸಂಖ್ಯೆ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಿಶ್ವದಲ್ಲಿ ಪ್ರಸ್ತುತ 750 ಕೋಟಿ, ದೇಶದಲ್ಲಿ 134 ಕೋಟಿ, ಕರ್ನಾಟಕ ರಾಜ್ಯದಲ್ಲಿ 6.8 ಕೋಟಿ ಜನಸಂಖ್ಯೆ ಇದೆ. 2017ರ ಜನಗಣತಿಯಂತೆ ಜಿಲ್ಲೆಯಲ್ಲಿ 10ಲಕ್ಷ, ದೇವನಹಳ್ಳಿ ತಾಲ್ಲೂಕಿನಲ್ಲಿ 2.3 ಲಕ್ಷ ಜನಸಂಖ್ಯೆ ಇದೆ ಎಂದು ಮಾಹಿತಿ ನೀಡಿದರು.

ವಿಶ್ವದಲ್ಲಿ ಪ್ರತಿ ಸೆಂಕೆಂಡಿಗೆ 160 ಮಕ್ಕಳು, ಪ್ರತಿ ಗಂಟೆಗೆ 9.2 ಸಾವಿರ ಜನನ ಪ್ರಮಾಣ ಹೆಚ್ಚಳವಾಗುತ್ತಿದೆ. ಆದರೆ, ಮರಣ ಪ್ರಮಾಣ ಇಳಿಮುಖವಾಗಿ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಶಿಕ್ಷಣ, ಉದ್ಯೋಗ, ಕುಡಿಯುವ ನೀರು, ಅಹಾರ ಕೊರತೆ ಉಂಟಾಗಿ ಜನರು ತತ್ತರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪ‍ಡಿಸಿದರು.

ಕಳೆದ 40 ವರ್ಷಗಳಿಂದ ಇಲಾಖೆ ಜನಸಂಖ್ಯೆ ನಿಯಂತ್ರಣಕ್ಕೆ ಶ್ರಮಿಸುತ್ತಲೇ ಇದೆ. ಶಿಕ್ಷಣದ ಕೊರತೆ, ಮೌಢ್ಯತೆ, ಗಂಡು ಮಗುಬೇಕೆಂಬ ಕಾರಣದಿಂದ ನಾಲ್ಕಾರು ಹೆಣ್ಣು ಮಕ್ಕಳ ಜನನ ಕಾರಣದಿಂದ ಕುಟುಂಬ ಯೋಜನೆ ಶೇಕಡವಾರು ಕಾರ್ಯಕ್ರಮ ಪ್ರಗತಿಯಾಗುತ್ತಿಲ್ಲ ಎಂದರು.

ಜನಸಂಖ್ಯೆ ನಿಯಂತ್ರಣಕ್ಕೆ ಶಾಶ್ವತ ಮತ್ತು ತಾತ್ಕಾಲಿಕ ಪರಿಹಾರವಿದೆ. ಪುರುಷರ ಸಂತಾನ ಶಕ್ತಿ ಹರಣಕ್ಕೆ ₹1500, ಮಹಿಳೆಯರಿಗೆ ₹1100 ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.

ಜಿಲ್ಲೆಯ ಎಲ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿವಾರ ಸಂತಾನ ಶಕ್ತಿ ಹರಣ ಶಿಬಿರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೆರಿಗೆ ನಂತರ ವಂಕಿಧಾರಣೆ ಉಚಿತವಾಗಿ ಮಾಡಿಸಿಕೊಳ್ಳಬಹುದು. ಅನೇಕ ನೂತನ ವಿಧಾನಗಳಿದ್ದು, ವೈದ್ಯರ ಸಲಹೆ ಪಡೆಯಬೇಕೆಂದು ತಿಳಿಸಿದರು.

ಅರ್ಥಶಾಸ್ತ್ರ ಉಪನ್ಯಾಸಕ ಡಾ.ಕೆಂಪೇಗೌಡ ಮಾತನಾಡಿ, ಜನಸಂಖ್ಯಾ ಸ್ಫೋಟ ಎಂಬ ಪದವೇ ಅವೈಜ್ಞಾನಿಕ, ದಿನಾಚರಣೆ ಬಗ್ಗೆ ಅಳವಾಗಿ ಚಿಂತಿಸಬೇಕು. ಜನಸಂಖ್ಯೆಗೆ ಕಡಿವಾಣ ಹಾಕಿದ ಚೀನಾ ದೇಶದ ಅರ್ಥಿಕ ಪ್ರಗತಿ ಭಾರತದಷ್ಟು ಬೆಳವಣಿಗೆಯಾಗುತ್ತಿಲ್ಲ ಎಂದರು.

ದೇಶಕ್ಕೆ ಯುವ ಶಕ್ತಿಯೇ ಸಂಪನ್ಮೂಲ. ದೇಶದಲ್ಲಿ ಮರಣದ ವಯಸ್ಸು ಸರಾಸರಿ 50 ವರ್ಷ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ಲಿಂಗಾನುಪಾತ ವ್ಯತ್ಯಾಸವಾಗುತ್ತಿದೆ. ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.

ಪ್ರಾಂಶುಪಾಲ ಡಾ.ಶಿವಶಂಕರಪ್ಪ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ನಂದಿನಿ, ಸದಸ್ಯರಾದ ವೆಂಕಟೇಶ್, ಚೈತ್ರಾ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲ ಕೃಷ್ಣ, ಸದಸ್ಯ ಶಶಿಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖಲೀಲ್ ಅಹಮದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆ.ಸಂಜಯ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಶಕೀಲಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !