ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ 

Last Updated 13 ಡಿಸೆಂಬರ್ 2018, 13:27 IST
ಅಕ್ಷರ ಗಾತ್ರ

ದೇವನಹಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.14ರಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಗ್ರಾಮಾಂತರ ಜಿಲ್ಲಾ ಸಂಚಾಲಕ ಡಿ.ಸಿ.ಅಂಬರೀಷ್‌ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬೆಳಗಾವಿಗೆ ತೆರಳುವ ಮುನ್ನಾ ಮಾಧ್ಯಮದವರೊಂದಿಗೆ ಮಾತನಾಡಿದರು.

ಪಿಟಿಸಿಎಲ್ ಕಾಯ್ದೆ 78/79 ಮತ್ತು ಎಸ್ಸಿ ಮತ್ತು ಎಸ್ಟಿ ಕಾಯ್ದೆ 1989 ಹಾಗೂ ಎಸ್ಸಿ – ಎಸ್ಟಿ ಸರ್ಕಾರಿ ನೌಕರರ ಮುಂಬಡ್ತಿ ಕಾಯ್ದೆ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಖಾಸಗಿ ಕ್ಷೇತ್ರದಲ್ಲಿಯು ಮೀಸಲಾತಿ ಜಾರಿಗೊಳಿಸಬೇಕು. ಕರ್ನಾಟಕ ಭೂ ಮಂಜೂರಾತಿ ಕಾಯ್ದೆ 1969ರ ಅನ್ವಯ ಪರಿಶಿಷ್ಟರಿಗೆ ಶೇ50 ರಷ್ಟು ಭೂಮಿ ಹಂಚಬೇಕು. ಬಗರ್ ಹುಕುಂಸಕ್ರಮೀಕರಣದಲ್ಲಿ ಪರಿಶಿಷ್ಟರ ಅರ್ಜಿ ವಜಾಗೊಳಿಸಿರುವುದನ್ನು ಮರು ಪರಿಶೀಲಿಸಿಬೇಕು. ಭೂ ಮಂಜೂರಾತಿ ಕಾಯ್ದೆ ಪ್ರಕಾರವೇ ಹಲವು ಬೇಡಿಕೆಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಸಮಿತಿ ಜಿಲ್ಲಾ ಘಟಕದ ಸಂಘಟನಾ ಸಂಚಾಲಕರಾದ ಎಸ್.ಡಿ.ಮುನಿರಾಜು, ಸುರೇಶ್, ಗೋವಿಂದರಾಜು, ಖಜಾಂಚಿ ರಾಜಣ್ಣ, ತಾಲ್ಲೂಕು ಸಂಚಾಲಕ ನರಸಿಂಹಯ್ಯ, ತಾಲ್ಲೂಕು ಸಂಘಟನಾ ಸಂಚಾಲಕರಾದ ಜಗದೀಶ್, ನಾಗಾರ್ಜುನ್, ವೆಂಕಟೇಶ್, ರಾಮ ಕೃಷ್ಣಪ್ಪ, ಮಣಿಕಂಠ, ಚಿಕ್ಕಣ್ಣ, ಡೈರಿ ದೊಡ್ಡರಂಗಪ್ಪ, ಗಂಗರಾಜು ಮಹಾದೇವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT