ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಸ್ನೇಹಿಯಾದ ಪೊಲೀಸರು’

Last Updated 29 ಅಕ್ಟೋಬರ್ 2020, 3:45 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಸಾರ್ವಜನಿಕರಿಗೆ ಹತ್ತಿರವಾಗಿರುವ ಜನಸ್ನೇಹಿ ಪೊಲೀಸ್ ಠಾಣೆ ಬಗ್ಗೆ ಯಾರೊಬ್ಬರು ಭಯಪಡುವ ಅಗತ್ಯವಿಲ್ಲ’ ಎಂದು ಪಿಎಸ್ಐ ರಘು ಹೇಳಿದರು.

ಇಲ್ಲಿನ ಚಪ್ಪರದ ಕಲ್ಲು ಕ್ರಾಸ್ ಬಳಿ ವಿಶ್ವನಾಥಪುರ ಪೊಲೀಸ್ ಠಾಣೆ ಮತ್ತು ಕರ್ನಾಟಕ ಬಹುಜನ ಹಿತರಕ್ಷಣಾ ವೇದಿಕೆಯ ಸಹಭಾಗಿತ್ವದಡಿ ನಡೆದ ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ‘112’ ಸಂಖ್ಯೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯು ಮೊದಲ ಬಾರಿಗೆ ಈ ಸಂಖ್ಯೆಯನ್ನು ಅಸ್ತಿತ್ವಕ್ಕೆ ತಂದಿದೆ. ಗ್ರಾಮಗಳಲ್ಲಿ ಶಾಂತಿ ಕದಡುವ ಯತ್ನ, ಕಳ್ಳತನ, ದರೋಡೆ, ಅತ್ಯಾಚಾರ, ಹಲ್ಲೆ, ಯುವತಿಯರನ್ನು ಚುಡಾಯಿಸುವುದು ಸೇರಿದಂತೆ ಸಮಾಜದಲ್ಲಿ ಅಸ್ಥಿರತೆಯನ್ನು ಉಂಟು ಮಾಡುವ ಯಾವುದೇ ಸಂಚಿನ ಬಗ್ಗೆ ಅನುಮಾನಾಸ್ಪದ ವ್ಯಕ್ತಿಗಳಿದ್ದರೆ ತ್ವರಿತವಾಗಿ ಕರೆ ಮಾಡಬಹುದು. ಕರೆ ಮಾಡಿದ ವ್ಯಕ್ತಿ ತಿಳಿಸಿದ ಜಾಗಕ್ಕೆ ಪೊಲೀಸರು ಹಾಜರಾಗುತ್ತಾರೆ ಎಂದು ಹೇಳಿದರು.

ಇಡೀ ದೇಶದಲ್ಲಿ ‘112’ ಒಂದೇ ಸಂಖ್ಯೆ ಕಾರ್ಯ ನಿರ್ವಹಿಸುತ್ತದೆ. ಅಪರಾಧ ತಡೆಗಟ್ಟುವುದರ ಜೊತೆಗೆ ಅಪಾಯಕಾರಿ ಸಂದರ್ಭದಲ್ಲಿ ಜನರ ರಕ್ಷಣೆಗೆ ಅನುಕೂಲವಾಗುತ್ತದೆ. ಧೈರ್ಯವಾಗಿ ಠಾಣೆಗೆ ಬಂದು ದೂರು ನೀಡಬಹುದು. ತುರ್ತು ಸಂದರ್ಭದಲ್ಲಿ ಈ ಸಂಖ್ಯೆಗೆ ಕರೆ ಮಾಡಬಹುದು. ಅಪರಿಚಿತರ ಬಗ್ಗೆ ಎಚ್ಚರವಹಿಸಬೇಕು. ಅಪರಿಚಿತರಿಗೆ ಬಾಡಿಗೆ ಮನೆ ನೀಡಬಾರದು. ನೀಡಬೇಕಿದ್ದರೆ ಸಮಗ್ರ ಮಾಹಿತಿ ಪಡೆದು ಪೊಲೀಸರಿಗೆ ತಿಳಿಸಿ ನೀಡಬೇಕು ಎಂದರು.

ಕರ್ನಾಟಕ ಬಹುಜನ ಹಿತರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಂ. ನರಸಿಂಹ ಮಾತನಾಡಿ, ಸಮಾಜದಲ್ಲಿ ಮೂಢನಂಬಿಕೆಗಳು ಹೆಚ್ಚುತ್ತಿವೆ. ಕಾವಿಧರಿಸಿ ಬರುವ ಎಲ್ಲರೂ ಸಾಧು–ಸಂತರಲ್ಲ. ಚಿನ್ನಾಭರಣವನ್ನು ದುಪ್ಪಟ್ಟು ಮಾಡುವುದಾಗಿ ಭರವಸೆ ಮೂಡಿಸುವುದು, ಒಡವೆ ಪಾಲಿಷ್ ಮಾಡುವ ನೆಪ, ಮನೆಯಲ್ಲಿ ಏಕಾಂಗಿ ಪೂಜೆ ಇತ್ಯಾದಿ ಬಗ್ಗೆ ಸಾರ್ವಜನಿಕರು ಮೋಸ ಹೋಗಬಾರದು ಎಂದರು.

ಎಎಸ್ಐ ರಾಮಕೃಷ್ಣ, ಹೆಡ್ ಕಾನ್‌ಸ್ಟೆಬಲ್‌ಗಳಾದ ಎಚ್. ರಾಜು, ಮಂಜುನಾಥ್, ಮಲ್ಪಪ್ಪ, ಮುಖಂಡರಾದ ಶಿವಕುಮಾರ್, ಗಣೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT