ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಅಭಿವೃದ್ಧಿಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ

ವಿವಿಧ ಕಂಪನಿಯ ಸಿಎಸ್‌ಆರ್‌ ವಿಭಾಗದ ಮುಖ್ಯಸ್ಥರ ಜತೆ ಶಿಕ್ಷಣ ಇಲಾಖೆಯ ಸಂವಾದ
Last Updated 10 ಜುಲೈ 2022, 6:00 IST
ಅಕ್ಷರ ಗಾತ್ರ

ಆನೇಕಲ್:ಆನೇಕಲ್‌ ಸಿಎಸ್‌ಆರ್‌ ವತಿಯಿಂದ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕಂಪನಿಗಳ ನೆರವು ಎಂಬ ವಿಷಯ ಕುರಿತು ಸಂವಾದ ಕಾರ್ಯಕ್ರಮ ಪಟ್ಟಣದಲ್ಲಿ ನಡೆಯಿತು. ವಿವಿಧ ಕಂಪನಿಗಳ ಸಿಎಸ್‌ಆರ್‌ ವಿಭಾಗದ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಲ್ಪಸಂಖ್ಯಾತರ ವಿಭಾಗದ ನಿರ್ದೇಶಕಿ ಸಿರಿಯಣ್ಣನವರ್‌ ಲಲಿತಾ ಚಂದ್ರಶೇಖರ್‌ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಸಾರ್ವಜನಿಕರ ಸಹಭಾಗಿತ್ವದಿಂದ ಅಭಿವೃದ್ಧಿಪಡಿಸಲು ಸರ್ಕಾರ ನಮ್ಮ ಶಾಲೆ ನಮ್ಮ ಕೊಡುಗೆ ಎಂಬ ವಿಶೇಷ ಕಾರ್ಯಕ್ರಮ ರೂಪಿಸಿದೆ. ಇದಕ್ಕಾಗಿಯೇ ಪ್ರತ್ಯೇಕ ಪೋರ್ಟಲ್‌ ಪ್ರಾರಂಭಿಸಲಾಗುತ್ತಿದೆ. ಆ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೊಡುಗೆ ನೀಡುವವರು ಈ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಶಾಲೆಗಳಿಗೆ ನೆರವಾಗಬೇಕು ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ವಿವಿಧ ಕಂಪನಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಆಸಕ್ತ ಕಂಪನಿಗಳು ತಮ್ಮ ನಿಧಿಯನ್ನು ಶಾಲೆಗಳ ಅಭಿವೃದ್ಧಿಗೆ ನೀಡಲು ಮತ್ತು ದಾನಿಗಳು ಕೊಡುಗೆ ನೀಡಲು ಮುಂದಾದರೆ ಇಲಾಖೆಯು ಎಲ್ಲಾ ರೀತಿಯ ನೆರವು ನೀಡಲು ಬದ್ಧ. ಸಿಎಸ್‌ಆರ್‌ ನಿಧಿಯು ಗ್ರಾಮೀಣ ಭಾಗಗಳಿಗೆ ಹೆಚ್ಚು ತಲುಪುವಂತಾಗ ಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ. ಜಯಲಕ್ಷ್ಮಿ ಮಾತನಾಡಿ, ತಾಲ್ಲೂಕಿನಲ್ಲಿ ನೂರಾರು ಕೈಗಾರಿಕೆಗಳಿವೆ. ಈ ಭಾಗದಲ್ಲಿ 274 ಸರ್ಕಾರಿ ಪ್ರಾಥಮಿಕ ಶಾಲೆಗಳು, 14 ಸರ್ಕಾರಿ ಪ್ರೌಢಶಾಲೆಗಳಿವೆ. ಕಂಪನಿಗಳು ಒಂದೊಂದು ಶಾಲೆಯನ್ನು ದತ್ತು ಪಡೆಯುವ ಮೂಲಕ ಆ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.

ಕೈಗಾರಿಕೆಗೊಂದು ಶಾಲೆ ಎಂಬ ವಿನೂತನ ಕಾರ್ಯಕ್ರಮ ರೂಪಿಸಿ ಎಲ್ಲಾ ಶಾಲೆಗಳನ್ನು ಕೈಗಾರಿಕೆಗಳೊಂದಿಗೆ ಜೋಡಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಆನೇಕಲ್‌ ಸಿಎಸ್‌ಆರ್‌ ಸಂಯೋಜಕ ಸಾಯಿಪ್ರಕಾಶ್‌ ಮಾತನಾಡಿ, ಸನ್‌ಸೇರಾ, ಬಿಲ್‌ಫೋರ್ಜ್‌, ಟೊಯೊಟೊ, ಬಾಷ್‌ ಕಂಪನಿಗಳು ಶಿಕ್ಷಣ ಕ್ಷೇತ್ರಕ್ಕೆ ತಾಲ್ಲೂಕಿನಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿವೆ. ಕಲ್ಲುಬಾಳು ಗ್ರಾಮದಲ್ಲಿ ಸುಮಾರು ₹ 4 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಮಾದರಿ ಶಾಲೆ ನಿರ್ಮಿಸಲು ಬಿಲ್‌ಫೋರ್ಜ್‌ ಮುಂದಾಗಿದೆ ಎಂದು ತಿಳಿಸಿದರು.

ಟೊಯೊಟೊ ಕಂಪನಿಯು ಕೋನಸಂದ್ರ ಗ್ರಾಮದಲ್ಲಿ ₹ 3 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಮಾದರಿ ಶಾಲೆ ನಿರ್ಮಿಸಲು ಕ್ರಿಯಾಯೋಜನೆ ರೂಪಿಸಿದೆ ಎಂದರು.

ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ಕೆ. ವಿಶ್ವನಾಥ್‌, ಮಹಾನಂದ್‌, ಮಹೇಂದ್ರ ಹೋಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ. ನಾಗರಾಜರೆಡ್ಡಿ, ಪರಿಸರ ತಜ್ಞೆ ರೇವತಿ ಕಾಮತ್‌, ಸನ್‌ಸೇರಾ ಕಂಪನಿಯ ಸಿಎಸ್‌ಆರ್‌ ವಿಭಾಗದ ಗುರುದತ್‌, ಮೋಹನ್‌, ಬಿಲ್‌ಫೋರ್ಜ್‌ ಕಂಪನಿಯ ಜೇಕಬ್, ಟೊಯೊಟೊ ಕಂಪನಿಯ ರಾಘವೇಂದ್ರ, ಬಯೋಕಾನ್‌ ಸಂಸ್ಥೆಯ ಶಿಲ್ಪಾ, ಡಿಆರ್‌ಡಿಒ ನಿವೃತ್ತ ವಿಜ್ಞಾನಿ ಪ್ರೊ.ಎಚ್‌.ಎಸ್. ಭಾಟಿಯಾ, ಅಶೋಕ್‌ ಬೆಳಗುಂಡು, ದೂರದರ್ಶನ ತಾಂತ್ರಿಕ ವಿಭಾಗದ ಮಾಜಿ ನಿರ್ದೇಶಕ ಸತ್ಯಾನಂದನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT