ವಿಜಯಪುರ(ದೇವನಹಳ್ಳಿ): ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪುರಸಭೆಗೆ ಮಾಹಿತಿ ನೀಡದೆ ಕಾನೂನು ನಿಯಮ ಮೀರಿ ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಂಡಿದ್ದಾರೆ. ರಸ್ತೆಗಾಗಿ ಕೋಟ್ಯಂತರ ಮೌಲ್ಯದ ಪುರಸಭೆಯ ಆಸ್ತಿ ಕಬಳಿಸಲು ಮುಂದಾಗಿದ್ದಾರೆ ಎಂದು ಪುರಸಭೆ ಸದಸ್ಯರು ಆರೋಪಿಸಿದರು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಚಿಕ್ಕಬಳ್ಳಾಪುರ ಮುಖ್ಯರಸ್ತೆಯ ರಸ್ತೆ ವಿಸ್ತರಣೆ ಕಾಮಗಾರಿ ಸಂಬಂಧಿಸಿದಂತೆ ಚರ್ಚಿಸಲಾಯಿತು. ಆಗ ಸದಸ್ಯ ಸಿ.ನಾರಾಯಣಸ್ವಾಮಿ ಈ ಆರೋಪ ಮಾಡಿದರು.

ಪುರಸಭೆ ಸ್ವತ್ತನ್ನು ಯಾವುದೇ ಕಾರಣಕ್ಕೂ ಲೋಕೋಪಯೋಗಿ ಇಲಾಖೆಗೆ ಬಿಟ್ಟು ಕೊಡಬಾರದು. ಪುರಸಭೆ ಸ್ವತ್ತಿನಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿ ಪುರಸಭೆಗೆ ಆದಾಯ ಬರುವಂತೆ ಮಾಡಬೇಕೆಂಬ ಒಕ್ಕೊರಲ ದನಿ ಕೇಳಿಬಂತು. ಇದಕ್ಕೆ ಎಲ್ಲಾ ಸದಸ್ಯರು ಒಪ್ಪಿಗೆ ನೀಡಿದರು.

ಪಟ್ಟಣದ ವಿವಿಧೆಡೆ ಪುರಸಭೆ ಸ್ವತ್ತು ಒತ್ತುವರಿ ಆಗಿದೆ. ಇದಕ್ಕೆ ಏನು ಕ್ರಮ ಕೈಗೊಂಡಿದ್ದೀರಾ? ಬಸವೇಶ್ವರ ನಗರದ ಸ.ನಂ 193 ರಲ್ಲಿ ಪುರಸಭೆ ಸ್ವತ್ತು 10 ಗುಂಟೆ ಜಮೀನಿಗೆ ಇ-ಸ್ವತ್ತು, ಚಕ್ಕುಬಂದಿ, ಕಾಂಪೌಂಡ್ ಇದೆ. ಈ ಸ್ವತ್ತನ್ನು ಖಾಸಗಿ ವ್ಯಕ್ತಿಗಳು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಸ್ವತ್ತಿಗೆ ಪುರಸಭೆಯಿಂದ ನಾಮಫಲಕ ಅಳವಡಿಸಿ ಎಂದು ಅನೇಕ ವರ್ಷಗಳಿಂದ ಪುರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸದಸ್ಯ ಸಿ.ಎಂ.ರಾಮು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.

ಯಾವಾಗ ಈ ಸ್ವತ್ತನ್ನು ಪುರಸಭೆಗೆ ಸ್ವಾಧೀನ ಮಾಡಿಕೊಳ್ಳುತ್ತಿರಾ? ಇನ್ನು ಎಷ್ಟು ಸಮಯ ಬೇಕು ಎಂದು ಕೇಳಿದಾಗ, ಜ.30 ರೊಳಗೆ ಸದರಿ ಜಾಗವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದಾಗಿ ಮುಖ್ಯಾಧಿಕಾರಿ ಸತ್ಯನಾರಾಯಣ ಭರವಸೆ ನೀಡಿದರು.

ಪುರಸಭೆಯ ಸದಸ್ಯರು ವಾರ್ಡಿನ ಸಮಸ್ಯೆ ಹೇಳಿದರೆ, ಹಣ ಇಲ್ಲ ಎನ್ನುತ್ತೀರಿ. ಸದಸ್ಯರ ಗಮನಕ್ಕೆ ಬಾರದೆ ಹಣ ಖರ್ಚು ಮಾಡಲು ನಿಮಗೆ ಅನುಮತಿ ಕೊಟ್ಟವರ್ಯಾರು? ಪುರಸಭೆ ಆಸ್ತಿ ಸಾರ್ವಜನಿಕರ ಆಸ್ತಿ ಅದನ್ನು ಉಳಿಸುವಂತಹ ಕೆಲಸವಾಗಬೇಕು ಎಂದು ಸದಸ್ಯ ನಂದಕುಮಾರ್ ಹೇಳಿದರು.

ಪಟ್ಟಣದೆಲ್ಲೆಡೆ ಯುಜಿಡಿ ಸಮಸ್ಯೆಯಿಂದ ರಸ್ತೆಗಳಲ್ಲಿ ಕೊಳಚೆ ನೀರು ಹರಿಯುತ್ತಿದೆ. ಯುಜಿಡಿ ಯಂತ್ರವನ್ನು ಖರೀದಿಸಲು ಕಳೆದ ಸಭೆಯಲ್ಲಿ ಅನುಮತಿ ನೀಡಿದರೂ ಇದುವರೆಗೂ ಖರೀದಿಸಿಲ್ಲ. ಇದರ ಬದಲಿಗೆ ಜೆಸಿಬಿ ಯಂತ್ರ ಖರೀದಿಸಲಾಗಿದೆ ಎಂದು ಸದಸ್ಯ ಎ.ಆರ್.ಹನೀಪುಲ್ಲಾ ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷೆ ಎಸ್.ಭವ್ಯಾಮಹೇಶ್, ಉಪಾಧ್ಯಕ್ಷೆ ತಾಜುನ್ನಿಸಾ, ಸದಸ್ಯರಾದ ಎಂ.ಸತೀಶ್ ಕುಮಾರ್, ಎಂ.ಕೇಶವಪ್ಪ, ರವಿಕುಮಾರ್, ರಾಜೇಶ್ವರಿಭಾಸ್ಕರ್, ವಿಮಲಾಬಸವರಾಜ್ ಸೇರಿದಂತೆ ಸದಸ್ಯರು ಇದ್ದರು.

ಕಾರ್ಯರೂಪಕ್ಕೆ ಬಾರದ ಚರ್ಚೆ: ಪ್ರತಿ ಸಭೆಯಲ್ಲಿ ವಿಷಯ ತರುತ್ತೇವೆ. ರೆಜುಲೇಷನ್ ಮಾಡುತ್ತಿದ್ದೇವೆ. ಸರ್ವಾನುಮತದಿಂದ ತೀರ್ಮಾನ ಮಾಡಿರುವ ಬಗ್ಗೆ ಮುಂದಿನ ಸಭೆಯಲ್ಲಿ ಶೇ 1 ರಷ್ಟು ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಬೇಸಿಗೆ ಆರಂಭಗೊಳ್ಳುತ್ತಿದೆ. ನೀರಿನ ಸಮಸ್ಯೆ ಹೆಚ್ಚಾಗಿದೆ. ಗುತ್ತಿಗೆದಾರರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದೆ ಇದನ್ನು ಸರಿಪಡಿಸಬೇಕು ಎಂದು ಎಂದು ಸದಸ್ಯ ಬೈರೇಗೌಡ ಹೇಳಿದರು.

ಅಧಿಕಾರಿಗಳಿಗೆ ಸೂಚನೆ

ಪಟ್ಟಣದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಬೀದಿದೀಪಗಳ ವ್ಯವಸ್ಥೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ ಸಾರ್ವಜನಿಕ ಸ್ಮಶಾನಗಳಲ್ಲಿ ಹೆಣ ಹೂಳಲು ಜಾಗವಿಲ್ಲ. ಸ್ಮಶಾನಗಳಿಗೆ ನೀರಿನ ಸಂಪರ್ಕ ಕಲ್ಪಿಸಿ. ಪಟ್ಟಣದಲ್ಲಿ ಅನುಮತಿ ಪಡೆಯದೆ ಪ್ಲೇಕ್ಸ್ ಬ್ಯಾನರ್ ಹಾಕಲು ಅವಕಾಶ ನೀಡಬಾರದು. ಬೀದಿನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ವಿನಾಕಾರಣ ಕಚೇರಿಗೆ ಅಲೆದಾಡದಂತೆ ನಿಯಮದಂತೆ ನಿಗದಿತ ಸಮಯದಲ್ಲಿ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡುವಂತೆ ಸಭೆಯಲ್ಲಿ ಸದಸ್ಯರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಗೆ ಪೊಲೀಸ್ ಭದ್ರತೆ

ಪುರಸಭೆಯಲ್ಲಿ ನಡೆದ ಸಾಮಾನ್ಯಸಭೆಯು ಇದೇ ಪ್ರಥಮ ಬಾರಿಗೆ ಪೊಲೀಸರ ಭದ್ರತೆಯಲ್ಲಿ ಸಾಮಾನ್ಯ ಸಭೆಯನ್ನು ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.