ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಯಿಗಳಿಗೆ ತಪ್ಪದೆ ಲಸಿಕೆ ಹಾಕಿಸಿ: ಡಾ.ವಿನೋದ್

Published : 12 ಸೆಪ್ಟೆಂಬರ್ 2024, 16:09 IST
Last Updated : 12 ಸೆಪ್ಟೆಂಬರ್ 2024, 16:09 IST
ಫಾಲೋ ಮಾಡಿ
Comments

ವಿಜಯಪುರ(ದೇವನಹಳ್ಳಿ): ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ಆವರಣದಲ್ಲಿ ಪಶು ಪಾಲನಾ ಇಲಾಖೆಯಿಂದ ಗುರುವಾರ ಹುಚ್ಚು ನಾಯಿ(ರೇಬೀಸ್) ಕಡಿತ ಕುರಿತು ತರಬೇತಿ ಆಯೋಜಿಸಲಾಗಿತ್ತು.

ಪಶು ವೈದ್ಯ ಆಸ್ಪತ್ರೆಯ ಮುಖ್ಯಪಶುವೈದ್ಯಾಧಿಕಾರಿ ಡಾ.ವಿನೋದ್ ಅವರು, ನಾಯಿಗಳಲ್ಲಿ ಹುಚ್ಚುರೋಗ ತಡೆಗಟ್ಟಲು ಪ್ರತಿಬಂಧಕ ಲಸಿಕೆ ಹಾಕಿಸುವ ಕುರಿತು ಜಾಗೃತಿ ಮೂಡಿಸಿದರು.

ಈ ವೇಳೆ ಮಾತನಾಡಿದ ಅವರು, ಸಾಕು ನಾಯಿಗಳಿಗೆ ಹುಚ್ಚುನಾಯಿ ಕಚ್ಚಿದಾಗ ರೋಗ ಎಡತಾಕದಂತೆ ಮುಂಜಾಗ್ರತಾ ಕ್ರಮವಾಗಿ ರೋಗ ನಿರೋಧಕ ಲಸಿಕೆ ನೀಡಲಾಗುತ್ತದೆ. ಮಾಲೀಕರು ತಪ್ಪದೆ ತಮ್ಮ ಸಾಕು ನಾಯಿಗಳಿಗೆ ಲಸಿಕೆ ಹಾಕಿಸಬೇಕು. ಲಸಿಕೆ ಪಡೆದುಕೊಂಡಿರುವ ನಾಯಿ ಮನುಷ್ಯರಿಗೆ ಕಚ್ಚಿದರೂ ತಕ್ಷಣ ರೋಗ ನಿರೋಧಕ ಲಸಿಕೆಯನ್ನು ಆಸ್ಪತ್ರೆಯಲ್ಲಿ ಪಡೆದುಕೊಳ್ಳಬೇಕು ಎಂದರು.

ರೋಗ ಮಾರಕವಾಗಿದ್ದು, ಅದು ಉಲ್ಬಣವಾದರೆ ಸಾವು ಖಚಿತ. ಇಲಾಖೆಯಿಂದ ನಾಯಿಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ಸಾಕು ನಾಯಿಗಳೊಂದಿಗೆ ಆಟವಾಡುವುದು, ಕೈ ತೊಳೆಯದೆ ಊಟ ಮಾಡಬಾರದು. ನಾಯಿ ಜೊಲ್ಲಿನಲ್ಲೂ ಸೋಂಕು ಹರಡುವ ಸಾಧ್ಯತೆ ಇರುತ್ತವೆ. ಕೆಲವರು, ನಾಯಿ ಎತ್ತಿ ಮುದ್ದಾಡುವಾಗ ಅದರ ಕೂದಲು ಬಟ್ಟೆಗಳಿಗೆ ಅಂಟಿಕೊಂಡು, ಆಹಾರ ಸೇವನೆ ವೇಳೆ ದೇಹ ಸೇರಿ ಕಾಯಿಲೆ ತರುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಬೀದಿನಾಯಿಗಳಿಗೆ ರೇಬೀಸ್ ತಡೆ ಲಸಿಕೆ ಹಾಕುವುದು ಅಸಾಧ್ಯವಾಗಿರುವ ಕಾರಣ, ಅವು ಕಚ್ಚಿದರೆ, ರೋಗವು ಗಂಭೀರ ಸ್ವರೂಪವಾಗಿರುತ್ತದೆ. ರಸ್ತೆಗಳಲ್ಲಿ ಹೋಗುವಾಗ ಮಲಗಿರುವ ನಾಯಿಗಳಿಗೆ ಕಲ್ಲು ಹೊಡೆಯುವುದು, ಅವುಗಳನ್ನು ರೇಗಿಸುವುದನ್ನು ಮಾಡಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಉಪಪ್ರಾಂಶುಪಾಲ ಪಿ.ವೆಂಕಟೇಶ್, ಪಶುವೈದ್ಯ ಆಸ್ಪತ್ರೆಯ ಸಿಬ್ಬಂದಿ ಹಾಗೂ ಶಿಕ್ಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT