ಜನವಸತಿ ಪ್ರದೇಶಕ್ಕೆ ಮಳೆ ನೀರು

ದೇವನಹಳ್ಳಿ: ತಾಲ್ಲೂಕಿನಾದ್ಯಂತ ಒಂದು ವಾರದಿಂದ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರೆದಿದೆ. ಬಹುತೇಕ ಕೆರೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿದೆ.
ದೇವನಹಳ್ಳಿಡಿ.ವಿ.ಎಂ ಕಾಲೊನಿಯಲ್ಲಿ ನಾಗರಾಜು ಎಂಬುವವರ ಮನೆ ಕುಸಿದುಬಿದ್ದಿದೆ. ಮನೆ ಕುಸಿದು ಬೀಳುವ ಮುನ್ಸೂಚನೆ ಅರಿತ ಕುಟುಂಬ ಸದಸ್ಯರು ತಕ್ಷಣ ಮನೆಯಿಂದ ಹೊರಗೆ ಬಂದಿದ್ದರಿಂದ ಭಾರಿ ಅನಾಹುತ ತಪ್ಪಿದೆ.
ಪಟ್ಟಣದ ಅಕ್ಕುಪೇಟೆ ಮತ್ತು ಕೋಡಿಮಂಚೇನಹಳ್ಳಿ ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆ ಸುತ್ತಮುತ್ತಲಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿರುವ ಜನರಲ್ಲಿ ಆತಂಕ ಮನೆ ಮಾಡಿದೆ. ಕೆಲ ಮನೆಗಳ ಮೇಲ್ಛಾವಣಿ ಸೋರಿಕೆಯಾಗುತ್ತಿದ್ದು ಮಹಿಳೆಯರು, ಮಕ್ಕಳು, ರಾತ್ರಿಯಿಡೀ ನಿದ್ದೆಯಿಲ್ಲದೆ ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಡಿಮಂಚೇನಹಳ್ಳಿ ಕೆರೆ ಪಕ್ಕದ ನಾಗಮ್ಮ ಎಂಬುವರ ಮನೆ ಜಲಾವೃತತಗೊಂಡಿದೆ. ಅಕ್ಕುಪೇಟೆ ಮತ್ತು ಬೊಮ್ಮವಾರಕ್ಕೆ ಹೋಗುವ ರೈಲ್ವೆ ಅಂಡರ್ ಪಾಸ್ ಜಲಾವೃತಗೊಂಡಿದೆ. ಅಂಡರ್ ಪಾಸ್‌ನಲ್ಲಿ 10ಕ್ಕೂ ಹೆಚ್ಚು ಅಡಿ ನೀರು ನಿಂತಿದೆ. ಹಲವು ಬಡಾವಣೆಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ವಿಜಯಪುರ ಗೋಣೂರು ಕೆರೆ ಕೋಡಿ ತುಂಬಿ ಗ್ರಾಮದೊಳಗೆ ನೀರು ನುಗ್ಗಿದೆ.
ತಾಲ್ಲೂಕಿನ ಕುಂದಾಣ ಗ್ರಾಮ ಪಂಚಾಯಿತಿ ವ್ಯಾಪ್ತಿ ದೇವಗಾನಹಳ್ಳಿ ಡಿ.ರಾಮಕೃಷ್ಣಪ್ಪ ಎಂಬುವವರ ಮನೆ ಗೋಡೆ ಕುಸಿದಿದೆ. ಮೇಲ್ಘಾವಣಿ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದೆ.
ವಿಜಯಪುರ ಹೋಬಳಿ ಗೋಣೂರು ಗ್ರಾಮದ ಕೆರೆ ಕೋಡಿ ಹರಿದು ನೀರು ಗ್ರಾಮಕ್ಕೆ ನುಗ್ಗಿದೆ. ರಾಗಿಹೊಲಗಳಲ್ಲಿ ನೀರು ನಿಂತಿರುವುದರಿಂದ ಕಟಾವು ಹಂತಕ್ಕೆ ಬಂದಿರುವ ಬೆಳೆಯಲ್ಲಿ ಮೊಳಕೆ ಬಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.