ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಿಗೆ ನುಗ್ಗಿದ ಮಳೆ ನೀರು: ಜನರಿಗೆ ಸಂಕಷ್ಟ

Last Updated 26 ಆಗಸ್ಟ್ 2021, 9:19 IST
ಅಕ್ಷರ ಗಾತ್ರ

ವಿಜಯಪುರ: ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದುಗುರ್ಕಿ ಗ್ರಾಮದಲ್ಲಿ ಮಂಗಳವಾರ ಸುರಿದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ನಮ್ಮೂರಿನಿಂದ ವೆಂಕಟಗಿರಿಕೋಟೆ ಕಡೆಗೆ ಸಂಚರಿಸುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯನ್ನು ಆರಂಭ ಮಾಡಿ ಒಂದೂವರೆ ವರ್ಷವಾಗಿದ್ದರೂ ಇದು ವರೆಗೂ ಪೂರ್ಣಗೊಳಿಸಿಲ್ಲ ಎಂದುಗ್ರಾ.ಪಂ. ಸದಸ್ಯ ಮಾರಪ್ಪ ದೂರಿದರು.

ಹೆದ್ದಾರಿಯಲ್ಲಿ ಹರಿಯುವ ನೀರು ಸೇರಿದಂತೆ ಕಾಮಗಾರಿ ಸ್ಥಳದಲ್ಲಿ ಮಾಡಿರುವ ಹಳ್ಳಗಳು ತುಂಬಿಕೊಂಡು ಊರೊಳಗೆ ನೀರು ನುಗ್ಗುತ್ತಿದೆ. ಕಾಂಕ್ರೀಟ್ ಚರಂಡಿ ಮಾಡಿದ್ದಾರೆ. ಈ ಚರಂಡಿಗೆ ನೀರು ಹೋಗಲು ಮಾಡಿರುವ ರಂಧ್ರಗಳು ಸಣ್ಣದಾಗಿರುವುದರಿಂದ ತಗ್ಗುಪ್ರದೇಶದಲ್ಲಿರುವ ಎಲ್ಲಾ ಮನೆಗಳಿಗೂ ನೀರು ನುಗ್ಗಿದ್ದು, ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಸಂಬಂಧಪಟ್ಟ ಗುತ್ತಿಗೆದಾರರು ಯಾರು ಎನ್ನುವುದು ಇದುವರೆಗೂ ಗೊತ್ತಾಗಿಲ್ಲ. ರಸ್ತೆ ವಿಸ್ತರಣೆ ಕಾಮಗಾರಿ ಗಾಗಿ ಟೆಂಡರ್ ಪಡೆದುಕೊಂಡಿರುವ ಗುತ್ತಿಗೆದಾರರೇ ಬೇರೆ, ಈ ಕಾಮಗಾರಿ ಮಾಡುತ್ತಿರುವವರೇ ಬೇರೆ. ಆದ್ದರಿಂದ ತ್ವರಿತವಾಗಿ ಈ ಕಾಮಗಾರಿ ಮುಗಿಸಿಲ್ಲದ ಕಾರಣ ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡಿ ಮಲಗಲು ಜಾಗವಿಲ್ಲದಂತಾಗಿದೆ. ಮನೆಗಳಲ್ಲಿ ಧಾನ್ಯಗಳು ಹಾಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT