ಹಾರೋಹಳ್ಳಿ: ಹಾರೋಹಳ್ಳಿ ತಾಲ್ಲೂಕಿನ ಚೀಲೂರು ಗ್ರಾಮದ ಹಲಗೇಗೌಡನದೊಡ್ಡಿ 8 ಎಕರೆ ಕೆರೆ ಇದೀಗ ಸಂಪೂರ್ಣ ವಿಷದ ಮಡುವಾಗಿ ಮಾರ್ಪಟ್ಟಿದೆ. ಮೀನುಗಳ ಮಾರಣ ಹೋಮ ನಡೆದು ಇದೀಗ ಕೆರೆ ಗಬ್ಬೆದ್ದು ನಾರುತ್ತಿದೆ.

ಈಗಷ್ಟೇ ಚೀಲೂರು ರಸ್ತೆ, ಜಕ್ಕಸಂದ್ರ ಸುತ್ತಮುತ್ತಲೂ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಲಾಗುತ್ತಿದೆ. ಮೂರು ತಿಂಗಳ ಹಿಂದೆ ಕೆರೆ ಪಕ್ಕದಲ್ಲಿಯೇ ಕಾರ್ಖಾನೆಯೊಂದು ಪ್ರಾರಂಭವಾಗಿದೆ. ಆ ಕಾರ್ಖಾನೆ ತ್ಯಾಜ್ಯದಿಂದಲೇ ಮೀನುಗಳು ಮೃತಪಟ್ಟಿವೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಕೆಲವರು ಬಿಸಿಲಿಗೆ ಮೀನುಗಳು ಮೃತಪಟ್ಟಿರಬಹುದೆಂದು ಶಂಕಿಸಿದ್ದಾರೆ.

ಸ್ಥಳೀಯವಾಗಿ ತಲೆಯೆತ್ತಿರುವ ಕಾರ್ಖಾನೆ ಕೆರೆಯ ಸ್ವರೂಪವನ್ನೇ ಹಾಳುಗೆಡವಿದೆ. ಕೆರೆ ಪಕ್ಕದಲ್ಲೇ ಶೌಚದ ಗುಂಡಿಗಳನ್ನು ನಿರ್ಮಿಸಿ ಅಲ್ಲಿಯೇ ಕಾರ್ಮಿಕರ ಶೌಚದ ನೀರನ್ನು ಬಿಡಲಾಗುತ್ತಿದೆ. ಕಾರ್ಖಾನೆ ಮಾಲೀಕರು ಈ ರೀತಿಯ ಹೊಣೆಗೇಡಿ ಕೆಲಸ ಮಾಡಬಾರದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಹಲಗೇಗೌಡನದೊಡ್ಡಿ ಕೆರೆಯಲ್ಲಿ ಬಗೆ ಬಗೆಯ ಮೀನುಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಕಾಮನ್ ಕಡಪು, ಗ್ಲಾಸ್ ಕಡಪು, ರಾಹು, ಕಾಟ್ಲಾ, ಜಿಲೇಬಿ ಸೇರಿದಂತೆ ಇನ್ನಿತರೆ ಜಾತಿಯ ಮೀನುಗಳನ್ನು ಸಾಕಲಾಗಿತ್ತು. ಒಂದೊಂದು ಮೀನು ಸುಮಾರು 7–7 ಕೆ.ಜಿಯಷ್ಟು ತೂಗುತ್ತಿದ್ದವು. ಕಳೆದ ಎರಡು ತಿಂಗಳಿನಿಂದ ಮೀನುಗಾರಿಕೆ ನಡೆಸಿರಲಿಲ್ಲ. ಇದೀಗ ಕೆರೆಯಲ್ಲಿದ್ದ ಮೀನುಗಳು ಸತ್ತು ತೇಲುತ್ತಿವೆ.

ಸ್ಥಳಕ್ಕೆ ಚೀಲೂರು ಗ್ರಾ.ಪಂ ಪಿಡಿಒ ತೆರಳಿ ಪರಿಶೀಲನೆ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-14-651254973

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.