ಕನಕಪುರ: ಕಸಬಾ ಹೋಬಳಿ ಆಡನಕುಪ್ಪೆ ಬಂಗ್ಲೆಯಲ್ಲಿರುವ ಮೌಲಾಅಲಿ ಮಸೀದಿಯಲ್ಲಿ ನೇಕಿಕೀಟೋಕರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ರಂಜಾನ್ ಹಬ್ಬದ 21ನೇ ಉಪವಾಸ ದಿನದ ಪ್ರಯುಕ್ತ ಹಬ್ಬಕ್ಕೆ ಬೇಕಾದ ದಿನಿಸಿ ಪದಾರ್ಥಗಳ ಕಿಟ್ಟನ್ನು ಬುಧವಾರ ವಿಚಾರಣೆ ಮಾಡಿದರು.

ಟ್ರಸ್ಟ್ ವತಿಯಿಂದ ಬಡವರಿಗೆ ಹಬ್ಬಕ್ಕಾಗಿ ಅಡಿಗೆ ಪದಾರ್ಥಗಳನ್ನು ಪ್ರತಿ ವರ್ಷ ವಿತರಣೆ ಮಾಡುತ್ತಿದ್ದು ಈ ವರ್ಷ ಆಡನಕುಪ್ಪೆ ಬಂಗ್ಲಾದಲ್ಲಿ ನೂತನವಾಗಿ ನಿರ್ಮಿಸಿರುವ ಮೌಲಾಅಲಿ ಮಸೀದಿಯಲ್ಲಿ ವಿತರಣೆ ಮಾಡಲು ಟ್ರಸ್ಟ್ ತೀರ್ಮಾನಿಸಿ 101 ಮಂದಿಗೆ ಆಹಾರ ಪದಾರ್ಥಗಳ ಕಿಟ್ಟನ್ನು ವಿತರಿಸಿದರು.

ಟ್ರಸ್ಟ್ ಅಧ್ಯಕ್ಷ ಸೈಯದ್ ತಾಜುದ್ದೀನ್ ಖಾದರಿ, ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಬೇಕು. ಇರುವವರು ಇಲ್ಲದವರಿಗೆ ಸಹಾಯ ಮಾಡಬೇಕು. ಸಮಾನತೆಯಿಂದ ಎಲ್ಲರೂ ಹಬ್ಬ ಆಚರಣೆ ಮಾಡಲು ಸಹಾಯದ ಅವಶ್ಯಕತೆ ಇರುವ 101 ಮಂದಿ ಬಡವರನ್ನು ಗುರುತಿಸಿ ಉಪವಾಸದ 21ನೇ ಪವಿತ್ರ ದಿನವಾದ ಎಂದು ಅಡಿಗೆ ಪದಾರ್ಥಗಳ ಕಿಟ್ಟನ್ನು ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಟ್ರಸ್ಟ್ ಕಾರ್ಯದರ್ಶಿಗಳಾದ ಸೈಯದ್ ಸಿದ್ಧಿಕ್, ಮಹಮ್ಮದ್ ಅಮ್ಜದ್, ಖಜಾಂಚಿ ಸೈಯದ್ ಸಾದತ್, ಸದಸ್ಯರಾದ ನೂರುಲ್ಲಾ, ಸೈಯದ್ ನುಸುರುಲ್ಲಾ, ಮಹಮ್ಮದ್ ಕಲಿಂ, ಮಹಮ್ಮದ್ ಅಕ್ರಂ, ಸೈಯದ್ ಹನೀಫ್, ಸೈಯದ್ ಕಲೀಂ, ಮಹಮ್ಮದ್ ಕಬೀರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.