ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ಗ್ರಾಮದಲ್ಲಿ ದೇಶಿನಾರಾಯಣಸ್ವಾಮಿ ಹಾಗೂ ರಾಮಚಂದ್ರಸ್ವಾಮಿ ರಥೋತ್ಸವ ಮತ್ತು ಕರಗ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಈಚೆಗೆ ವಿಜೃಂಭಣೆಯಿಂದ ನೆರವೇರಿತು.

ನವ ದಿನಗಳ ಸಂಕಲ್ಪಪೂರಕವಾಗಿ ಅಂಕುರಾರ್ಪಣೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ಪಂಚರಾತ್ರ ಆಗಮದಂತೆ ನಡೆಯಿತು. ನಂತರ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಈ ವೇಳೆ ಕೀಲುಕುದುರೆ, ತಮಟೆ ವಾದ್ಯ, ಹನುಮ ವೇಷಧಾರಿ ಮೆರವಣಿಗೆ ಹಾಗೂ ಎತ್ತುಗಳ ಪ್ರದರ್ಶನ ಗಮನ ಸೆಳೆಯಿತು.

ಸಾಯಿಬಾಬಾ ದೇವಾಲಯದ ವರೆಗೆ ಸಾಗಿದ ಮೆರವಣಿಗೆಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ, ಪಾನಕ, ಮಜ್ಜಿಗೆ ಮತ್ತು ಹೆಸರುಬೇಳೆ ವಿತರಿಸಲಾಯಿತು. ರಾತ್ರಿ ವೇಳೆ ದ್ರೌಪದಮ್ಮ ದೇವಿಯ ಕರಗ ಮಹೋತ್ಸವವೂ ನಡೆಯಿತು.

ಗ್ರಾಮದ ಭಕ್ತರು ರಥವನ್ನು ಎಳೆದು, ದವನ, ಬಾಳೆಹಣ್ಣು ಅರ್ಪಿಸಿದರು. ಮಹಿಳಾ ತಂಡದ ವೀರಗಾಸೆ ಪ್ರದರ್ಶನ ಭಕ್ತರ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.