ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್‌: ದಾಖಲೆ ಮತದಾನ

ಕೇಸರಿ ಪೇಟ ಧರಿಸಿ ಮತಗಟ್ಟೆಗೆ ಬಂದ ಬಿಜೆಪಿ ಬೆಂಬಲಿತ ಸದಸ್ಯರು
Last Updated 11 ಡಿಸೆಂಬರ್ 2021, 1:59 IST
ಅಕ್ಷರ ಗಾತ್ರ

ಆನೇಕಲ್:ಬೆಂಗಳೂರು ನಗರ ಜಿಲ್ಲಾ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಆನೇಕಲ್‌ ತಾಲ್ಲೂಕಿನಲ್ಲಿ ಶೇ 100ರಷ್ಟು ಮತದಾನವಾಗಿದೆ. ಎಲ್ಲೆಡೆ ಶಾಂತಿಯುತ ಮತದಾನ ನಡೆದಿದೆ ಎಂದು ತಹಶೀಲ್ದಾರ್‌ ಪಿ. ದಿನೇಶ್‌ ತಿಳಿಸಿದರು.

ತಾಲ್ಲೂಕಿನಲ್ಲಿ 28 ಗ್ರಾಮ ಪಂಚಾಯಿತಿಗಳು ಮತ್ತು 3 ಪುರಸಭೆ ಸೇರಿದಂತೆ 31 ಮತಗಟ್ಟೆಗಳನ್ನು
ಸ್ಥಾಪಿಸಲಾಗಿತ್ತು.

425 ಮಹಿಳೆಯರು, 423 ಪುರುಷರು ಮತ್ತು ಇತರೆ ಒಬ್ಬರು ಸೇರಿದಂತೆ 849 ಮತದಾರರಿದ್ದರು. 849 ಮತಗಳು ಚಲಾವಣೆಯಾಗುವ ಮೂಲಕ ಶೇ 100ರಷ್ಟು ಮತದಾನವಾಗಿದೆ.

ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಬಿಜೆಪಿ ಬೆಂಬಲಿತ ಮತದಾರರು ಒಗ್ಗೂಡಿ ತಲೆಗೆ ಕೇಸರಿ ಪೇಟಗಳನ್ನು ಧರಿಸಿ ಮತ ಚಲಾಯಿಸಲು ಬಂದಿದ್ದು ವಿಶೇಷವಾಗಿತ್ತು.

ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರದ ಜೊತೆಗೆ ಸದಸ್ಯರು ಮತ ಕೇಂದ್ರದ ಬಳಿಗೆ ಮುಖಂಡರೊಂದಿಗೆ ಆಗಮಿಸಿ ನಂತರ ಮತ
ಚಲಾಯಿಸಿದರು.

ಸುರಗಜಕ್ಕನಹಳ್ಳಿ, ಕರ್ಪೂರು, ನೆರಳೂರು, ದೊಮ್ಮಸಂದ್ರ, ಯಮರೆ, ಕಲ್ಲುಬಾಳು, ಮಂಟಪ, ಹಾರಗದ್ದೆ ಸೇರಿದಂತೆ ಎಲ್ಲೆಡೆ ಕೇಸರಿ ಪೇಟಗಳೊಂದಿಗೆ ಮತ ಚಲಾಯಿಸಲು ಗ್ರಾಮ ಪಂಚಾಯಿತಿ ಸದಸ್ಯರು ಆಗಮಿಸಿದ್ದರು.

ಆನೇಕಲ್‌ ಪುರಸಭೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಶಾಸಕ ಬಿ. ಶಿವಣ್ಣ ಮತ ಚಲಾಯಿಸಿದರು. ಪುರಸಭಾ ಅಧ್ಯಕ್ಷ ಎನ್‌.ಎಸ್‌. ಪದ್ಮನಾಭ, ಉಪಾಧ್ಯಕ್ಷೆ ಮಾಲಾ ಭಾರ್ಗವ ಅವರು ಕಾಂಗ್ರೆಸ್‌ ಪುರಸಭಾ ಸದಸ್ಯರೊಂದಿಗೆ ಆಗಮಿಸಿ ಮತ ಚಲಾಯಿಸಿದರು.

ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 7 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಅವರು ಬಿಜೆಪಿ ಬೆಂಬಲಿತ ಸದಸ್ಯರನ್ನು ಒಗ್ಗೂಡಿಸಿ ಆಯಾ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT