20 ರಿಂದ ಕಂದಾಯ ಪ್ರಕರಣ ವಿಚಾರಣೆ

7

20 ರಿಂದ ಕಂದಾಯ ಪ್ರಕರಣ ವಿಚಾರಣೆ

Published:
Updated:

ದೇವನಹಳ್ಳಿ : ಜಿಲ್ಲಾ ದಂಡಾಧಿಕಾರಿ ವ್ಯಾಪ್ತಿಯಲ್ಲಿ ಬರುವ ಕಂದಾಯ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯು ಅ.20 ರಿಂದ ಚಪ್ಪರದ ಕಲ್ಲು ಬಳಿ ಇರುವ ಜಿಲ್ಲಾಡಳಿತ ನ್ಯಾಯಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಪುನರ್‌ ಪರಿಶೀಲನಾ ಅರ್ಜಿ, ಎಲ್.ಎನ್.ಡಿ.ಆರ್.ಎ. ಹಾಗೂ ಎಲ್.ಆರ್.ಎಫ್ ಮತ್ತು ಐ.ಎನ್.ಎಂ.ಗೆ ಸಂಬಂಧಿಸಿದ ಪ್ರಕರಣ ಪ್ರತಿ ತಿಂಗಳಿನ 1ನೇ, 3ನೇ ಹಾಗೂ 4ನೇ ಶನಿವಾರದಂದು ಬೆಳಿಗ್ಗೆ 10.30ರಿಂದ ಸಂಜೆ 5.30 ರವರೆಗ ನಡೆಯಲಿದೆ. ಪಿ.ಟಿ.ಸಿ.ಎಲ್ ಮತ್ತು ಎಂ.ಎ.ಜಿ, ಸರ್ವೇ ಮೇಲ್ಮನವಿ, ಮುನ್ಸಿಪಲ್ ಹಾಗೂ ಆಹಾರ ಶಾಖೆಯ ಪ್ರಕರಣಗಳು ಪ್ರತಿ ತಿಂಗಳ 1 ನೇ ಮತ್ತು 3ನೇ ಶುಕ್ರವಾರ ಬೆಳಿಗ್ಗೆ 10.30 ರಿಂದ ಸಂಜೆ 5.30 ರವರೆಗೆ ನಡೆಯಲಿವೆ.

ಅರ್ಬಿಟ್ರೇಷನ್ ಪ್ರಕಣಗಳು ಪ್ರತಿ ತಿಂಗಳ 2ನೇ ಮತ್ತು 4ನೇ ಶುಕ್ರವಾರ ಬೆಳಿಗ್ಗೆ 10.30 ರಿಂದ ಸಂಜೆ 5.30 ರವರೆಗೆ ನಡೆಯಲಿದೆ. ಇನ್ನು ಮುಂದೆ ನೂತನ ಜಿಲ್ಲಾಡಳಿತ ಕೇಂದ್ರ ಚಪ್ಪರದ ಕಲ್ಲು ಬಳಿಯೇ ನಡೆಯಲಿದ್ದು ಸಹಕರಿಸುವಂತೆ ಕೋರಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !