ಮಂಗಳವಾರ, ಅಕ್ಟೋಬರ್ 20, 2020
25 °C

ರಸ್ತೆಯಲ್ಲಿ ಗುಂಡಿ: ಚಾಲಕರಿಗೆ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ನಗರದ ವಿವಿಧ ಬಡಾವಣೆ ರಸ್ತೆಗಳಲ್ಲಿ ಅಪಾಯಕಾರಿ ಅಳವಾದ ಗುಂಡಿಗಳಿದ್ದು ದೈನಂದಿನ ಚಾಲಕರಿಗೆ ಸಂಕಷ್ಟವನ್ನು ತಂದೊಡ್ಡಿದೆ’ ಎಂದು ಚಾಲಕರು ದೂರಿದ್ದಾರೆ.

‘ನಗರದ ಗಿರಿಯಮ್ಮ ಸರ್ಕಲ್, ಹಳೆ ಬಸ್ ನಿಲ್ದಾಣ, ಅಚಲ ಮಂದಿರ ಮುಂಭಾಗ, ಹಲಾಲ್ ಗುಡ್ಡೆ ರಸ್ತೆ ಮಾರ್ಗ, ವಿಜಯಪುರ ಸರ್ಕಲ್ ಬಳಿಯ ತಿರುವು ರಸ್ತೆ ಮತ್ತು ಹಳೆಯ ಸಹಾಯ ಸಾರಿಗೆ ಇಲಾಖೆ ಕಚೇರಿ ಮುಂಭಾಗದ ರಸ್ತೆಗಳಲ್ಲಿ ಅಳವಾದ ಗುಂಡಿಗಳು ಇದ್ದು ಕೆಲವು ಗುಂಡಿಗಳಿಂದ ಅಪಘಾತಗಳಾಗಿವೆ. ಚಾಲಕರು ಗುಂಡಿಗಳಿಗೆ ಭಯಪಟ್ಟು ದ್ವಿಮುಖ ಸಂಚಾರದ ರಸ್ತೆಗೆ ಕಡಿವಾಣ ಹಾಕಿ ಒಂದೇ ಕಡೆಯಿಂದ ಸಂಚಾರ ಮಾಡುತ್ತಿರುವುದರಿಂದ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ’ ಎಂಬುದು ಚಾಲಕರ ದೂರು.

ರಾಷ್ಟ್ರೀಯ ಹೆದ್ದಾರಿ 7ರ ರಸ್ತೆಯಾಗಿ ನಗರದ ಮಧ್ಯಭಾಗದಿಂದ ವಿವಿಧೆಡೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆಗೆ ಕಳೆದ 5 ವರ್ಷಗಳ ಹಿಂದೆ ಪುರಸಭೆ ವ್ಯಾಪ್ತಿಗೆ ರಸ್ತೆಯನ್ನು ಹಸ್ತಾಂತರ ಮಾಡಿದೆ. ಈ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕನಿಷ್ಠ ರಸ್ತೆಯಲ್ಲಿನ ಗುಂಡಿ ಮುಚ್ಚುವ ಕೆಲಸ ಮಾಡುತ್ತಿಲ್ಲ. ಪುರಸಭೆ ಅಧಿಕಾರಿಗಳನ್ನು ಕೇಳಿದರೆ ರಸ್ತೆಯಲ್ಲಿ ಗುಂಡಿ ಮುಚ್ಚುವ ಕೆಲಸ ನಮ್ಮದಲ್ಲ. ನಮ್ಮಲ್ಲಿ ಅನುದಾನವು ಇಲ್ಲ ಎನ್ನುತ್ತಾರೆ. ವಾಹನಗಳಿಂದ ಸಾರಿಗೆ ಇಲಾಖೆ ರಸ್ತೆ ಶುಲ್ಕವನ್ನು ಭರಿಸಿಕೊಳ್ಳತ್ತದೆ. ರಸ್ತೆಗಳು ಮಾತ್ರ ಅಭಿವೃದ್ಧಿಯಾಗುತ್ತಿಲ್ಲ ಎಂಬುದಾಗಿ ಸರಕು ಸಾಗಾಣಿಕೆ ವಾಹನ ಚಾಲಕ ಗೋಪಿ ದೂರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು