ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ, ಚರಂಡಿ ಅವ್ಯವಸ್ಥೆ: ಜನರ ಆಕ್ರೋಶ

Last Updated 11 ಡಿಸೆಂಬರ್ 2021, 1:58 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಖಾಸ್‍ಬಾಗ್, ದರ್ಗಾಪುರ ಭಾಗದ ರೈಲ್ವೆ ಕೆಳಸೇತುವೆಯಿಂದ ನಾಗರಕೆರೆಯ ವಾಯುವಿಹಾರದ ಸ್ಥಳ ಹಾಗೂ ದರ್ಗಾ ಮಾರ್ಗದ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ನಗರಸಭೆಯ ನಿರ್ಲಕ್ಷ್ಯಕ್ಕೆ ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಪೌರಾಯುಕ್ತರು, ರೈಲ್ವೆ ಸ್ಟೇಷನ್ ಮಾಸ್ಟರ್, ಲೋಕೋಪಯೋಗಿ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರು.

ಈ ಕುರಿತು ಮಾಹಿತಿ ನೀಡಿದ ಮುಖಂಡ ಕೆ.ಜಿ. ಶಿವರಾಮ್, ನಗರದ ಖಾಸ್‍ಬಾಗ್ ಮತ್ತು ಶ್ರೀನಗರ ಬಡಾವಣೆಗಳ ಮೂಲಕ ಬರುವ ಚರಂಡಿ ಮಾರ್ಗ ರೈಲ್ವೆ ಅಂಡರ್‌ಪಾಸ್ ಬಳಿಯೇ ಕೊನೆಗೊಂಡಿದೆ. ಅಲ್ಲಿಂದ ರಾಜಕಾಲುವೆಗೆ ಸೇರ್ಪಡೆಯಾಗಿದೆ. ನೀರು ಸಮರ್ಪಕವಾಗಿ ಹರಿಯದೆ ತೊಂದರೆ ಉಂಟಾಗಿದೆ. ಬಡಾವಣೆಯ ಜನತೆಗೆ ನಿತ್ಯ ನರಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಶಾಸಕ ಟಿ. ವೆಂಕಟರಮಣಯ್ಯ ಅವರ ಗಮನಕ್ಕೆ ತರಲಾಗಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಈ ಭಾಗದಲ್ಲಿ ಯಾವುದೇ ವ್ಯವಸ್ಥಿತ ಕಾಂಕ್ರೀಟ್ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ನೀರು ಹೊರಗೆ ಹರಿಯುತ್ತಿದ್ದು, ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ ಎಂದು ತಿಳಿಸಿದರು.

ಕೊಳಚೆ ನೀರಿನಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಕಳೆದ ತಿಂಗಳು ಮಳೆ ಹೆಚ್ಚಾಗಿದ್ದ ವೇಳೆ ಈ ಭಾಗದಲ್ಲಿ ಪ್ರವಾಹದ ರೀತಿ ನೀರು ಹರಿಯುತ್ತಿದ್ದು, ಸಮರ್ಪಕ ನಿರ್ವಹಣಾ ವ್ಯವಸ್ಥೆ ಮರೀಚಿಕೆಯಾಗಿದೆ ಎಂದು
ತಿಳಿಸಿದರು.

ಮುಖಂಡರಾದ ಫಾರೂಕ್‌ ಪಾಷಾ, ಹಬೀಬ್, ಬಸವರಾಜು, ಸುನಿಲ್, ಸನಾವುಲ್ಲಾ, ಮೌಲಾಜಾನ್, ಮಹೇಶ್, ವೆಂಕಟರಮಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT