ಕಾಡಿನ ಬೆಳವಣಿಗೆಯಲ್ಲಿ ಹುಲಿ ಪಾತ್ರ ಮುಖ್ಯ

7

ಕಾಡಿನ ಬೆಳವಣಿಗೆಯಲ್ಲಿ ಹುಲಿ ಪಾತ್ರ ಮುಖ್ಯ

Published:
Updated:
Deccan Herald

ದೊಡ್ಡಬಳ್ಳಾಪುರ: ತಾಲ್ಲೂಕಿನ ಮೆಳೇಕೋಟೆ ಕ್ರಾಸ್‌ ಎಸ್.ಜೆ.ಸಿ.ಆರ್.ವಿದ್ಯಾನಿಕೇತನ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳು ಶಾಲಾವನದಲ್ಲಿ ವಿವಿಧ ಹುಲಿವೇಷಗಳನ್ನು ಧರಿಸಿ ‘ಹುಲಿ ಸಂರಕ್ಷಣಾ ದಿನ’ವನ್ನು ಆಚರಿಸಿದರು.

ಶಾಲೆಯ ಸಹ ಮುಖ್ಯಶಿಕ್ಷಕ ಎಚ್.ಎಲ್.ವಿಜಯಕುಮಾರ್‌ ಮಾತನಾಡಿ, ‘ರಾಷ್ಟ್ರೀಯ ಪ್ರಾಣಿ ಎನ್ನುವ ಖ್ಯಾತಿ ಪಡೆದಿರುವ ಹುಲಿಗಳು ನಮ್ಮ ರಾಜ್ಯದ ಬಂಡಿಪುರ, ನಾಗರಹೊಳೆ ಮತ್ತಿತರೆ ಕಾಡುಗಳಲ್ಲಿ ವಾಸವಾಗಿವೆ’ ಎಂದರು.

ಕಾಡಿನಲ್ಲಿ ಪ್ರಾಣಿಗಳ ನಡುವೆ ಸಮತೋಲನ ಕಾಪಾಡುವಲ್ಲಿ ಹುಲಿಯ ಪಾತ್ರ ದೊಡ್ಡದು. ಕಾಡು ಪ್ರಾಣಿಗಳನ್ನು ಮನುಷ್ಯರು ಬೇಟೆಯಾಡುವುದರಿಂದ ಹುಲಿಗೆ ಆಹಾರದ ಕೊರತೆಯುಂಟಾಗಿ ಹುಲಿಗಳ ಸಂತತಿ ಕ್ಷೀಣಿಸುವ ಅಪಾಯಗಳಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಚರ್ಮ ಸೇರಿದಂತೆ ಹುಲಿಯ ಇತರೆ ಅಂಗಾಂಗಗಳಿಗೂ ಬೇಡಿಕೆ ಇರುವುದರಿಂದ ಅವುಗಳನ್ನು ಬೇಟೆಯಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹುಲಿ ಸಂತತಿ ನಾಶವಾದರೆ ಕಾಡೂ ನಾಶವಾಗುವ ಅಪಾಯಗಳಿವೆ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಕಾಡು ಪ್ರಾಣಿಗಳ ಜೀವನ ಕ್ರಮ, ಚಲನವಲನಗಳ ಬಗ್ಗೆ ಮಾಹಿತಿ ಪಡೆಯುವುದರಿಂದ ಅವುಗಳ ಬಗ್ಗೆ ಪ್ರೀತಿ ಮೂಡಲು ಸಹಕಾರಿಯಾಗಲಿದೆ ಎಂದರು.

ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕ ಸಂಯೋಜಕಿ ವೇದ, ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !