ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ದಾಖಲೆ ಇಲ್ಲದೆ ₹11.5ಲಕ್ಷ ವಶಕ್ಕೆ 

ಭಾನುವಾರ, ಏಪ್ರಿಲ್ 21, 2019
26 °C

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ದಾಖಲೆ ಇಲ್ಲದೆ ₹11.5ಲಕ್ಷ ವಶಕ್ಕೆ 

Published:
Updated:
Prajavani

ದೇವನಹಳ್ಳಿ : ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ದಾಖಲೆ ಇಲ್ಲದೆ ಬ್ಯಾಗ್‌ನಲ್ಲಿ ಸಾಗಿಸುತ್ತಿದ್ದ ₹11.5ಲಕ್ಷ ನಗದು ಹಣವನ್ನು ಇಲ್ಲಿನ ರಾಣಿಸರ್ಕಲ್ ಬಳಿಯ ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ಸಂದರ್ಭದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರ ಮೂಲದ ಅಚಲ್, ಅಶೋಕ್ ಗೆಂಟವಾರ್ ಚಿಕ್ಕಬಳ್ಳಾಪುರದರಿಂದ ಬೆಂಗಳೂರಿಗೆ ಹಣದೊಂದಿಗೆ ಪ್ರಯಾಣಿಸುತ್ತಿದ್ದರು. ಎರಡು ಸಾವಿರ ಮುಖಬೆಲೆಯ ನೂರು ನೋಟಿನ ಒಂದು ಬಂಡಲ್ ಮತ್ತು ಐದು ನೂರು ರೂಪಾಯಿಗಳ 19 ಬಂಡಲ್‌ನ ₹9.5 ಲಕ್ಷ ಸೇರಿದಂತೆ ಒಟ್ಟು ₹11.5ಲಕ್ಷ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಮಂಜುನಾಥ್ ಹೇಳಿದರು. ತಪಾಸಣಾಧಿಕಾರಿಗಳಾದ ರಾಜಶೇಖರ್, ಚಂದ್ರಬಾಬು, ರಾಮಯ್ಯ, ನವೀನ್ ನಾಯ್ಕ, ಶ್ರೀನಿವಾಸ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !