ದೊಡ್ಡನಲ್ಲಾಲ(ಹೊಸಕೋಟೆ): ಚಿಕ್ಕನಲ್ಲಾಲ ಗ್ರಾಮದಲ್ಲಿ ಭಾನುವಾರ ರಾತ್ರಿ ವೇಣುಗೋಪಾಲ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ‘ಸಾಮ್ರಾಟ್ ಸುಯೋಧನ’ ಪೌರಾಣಿಕ ನಾಟಕ ಪ್ರದರ್ಶಿಸಿತು.

ಪ್ರತಿನಿತ್ಯ ಮನುಷ್ಯನ ಜೀವನದಲ್ಲಿ ನಡೆಯುವ ಧರ್ಮ, ಅಧರ್ಮಗಳ ನಡುವಿನ ತಿಕ್ಕಾಟವನ್ನು ರಾಮಸ್ವಾಮಿ ನಿರ್ದೇಶನದಲ್ಲಿ ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.

ದಾನ ಧರ್ಮದ ವ್ಯಕ್ತಿಯಾಗಿ ಧರ್ಮರಾಯ, ನಾನು ಎಂಬ ಅಹಂ ನಿಂದ ತನ್ನ ಅಂತ್ಯ ತೊಡಿಕೊಂಡ ದುರ್ಯೋಧನ, ಕುಯುಕ್ತಿ ಮನಸ್ಥಿತಿಯ ಶಕುನಿಯಿಂದ ಸುಖಾಂತ್ಯದ ಮಹಾಭಾರತ ಹೇಗೆ ಪರಿಸಮಾಪ್ತಿ ಹೊಂದಿತು. ಅರ್ಜುನ ಅಚಲ ನಂಬಿಕೆ ಕುರಿತು ಕಲಾವಿದರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರಲ್ಲಿ ಭಾವಪರವಶತೆ ಉಂಟುಮಾಡುವಲ್ಲಿ ಯಶಸ್ವಿಯಾದರು.

ಶಾಸಕ ಶರತ್ ಬಚ್ಚೇಗೌಡ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ತಿಮ್ಮರಾಯಪ್ಪ,ಸಂಜೀವ್ ಗೌಡ, ಪೂಜರಾಮನಹಳ್ಳಿ ರಾಜ್ ಗೋಪಾಲ , ಚೇರ್ಮನ್ ಚನ್ನಪ್ಪ, ರಮೇಶ್, ಪಿ ಕೆ ಎಸ್ ಶ್ರೀನಿವಾಸ್, ಗೋವಿಂದಪ್ಪ, ಬತ್ಯಪ್ಪ, ನಲ್ಲಾಲ ನಾರಾಯಣಸ್ವಾಮಿ, ಲಕ್ಷ್ಮಣ್, ಪಿಡಿಒ ಚನ್ನಪ್ಪ, ಸೀನಪ್ಪ ನಾಟಕ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.