ಸರ್ಜಾಪುರ(ಆನೇಕಲ್): ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಖಂಡಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯು 306ನೇ ದಿನಕ್ಕೆ ಕಾಲಿಟ್ಟಿದ್ದು, ವಿಶ್ವ ತಾಯಂದಿರ ದಿನದ ಅಂಗವಾಗಿ ಮಹಿಳೆಯರು ಒನಕೆ ಮತ್ತು ಪಂಜಿನ ದೀಪ ಹಿಡಿದು ಮುತ್ತಾನಲ್ಲೂರು ಗ್ರಾಮದಲ್ಲಿ ಮೆರವಣಿಗೆ ನಡೆಸಿ ಕೆಐಎಡಿಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತೊಟ್ಟಿಲು ತೂಗುವ ಕೈಗಳಿಗೆ ಪ್ರತಿಭಟನೆಗೆ ಬಂದಿವೆ. ರೈತರು 300ಕ್ಕೂ ಹೆಚ್ಚು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಗಮನ ವಹಿಸದೇ ಇರುವುದು ಅತ್ಯಂತ ದುಃಖದ ಸಂಗತಿ. ಈ ಭಾಗದ ಅಧಿಕಾರಿಗಳು ತಪ್ಪು ವರದಿಗಳನ್ನು ನೀಡಿದ್ದಾರೆ. ಫಲವತ್ತಾದ ಭೂಮಿಯನ್ನು ಬಂಜರು ಭೂಮಿ ಅವರು ವರದಿ ಮಾಡಿರುವ ಅಧಿಕಾರಿಗಳಿಗೆ ರೈತರ ಶಾಪ ತಟ್ಟುತ್ತದೆ ಎಂದು ರೈತ ಮಹಿಳೆ ಸುಶೀಲಮ್ಮ ಕಿಡಿಕಾರಿದರು.

ರೈತರ ತ್ಯಾಗ ಮತ್ತು ಪರಿಶ್ರಮದಿಂದಲೇ ಸಮಾಜ ಬದುಕುತ್ತಿದೆ. ರೈತರು ತಮ್ಮ ಜಮೀನುಗಳನ್ನು ಉಳಿಸಿಕೊಳ್ಳಲು ಪ್ರತಿಭಟನೆ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ತಾಯಂದಿರ ದಿನದ ಪ್ರಯುಕ್ತ ಗ್ರಾಮದ ಮಹಿಳೆಯರು ಒಗ್ಗೂಡಿ ಒನಕೆಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಮಹಿಳೆಯರು ಒಗ್ಗೂಡಿ ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಗ್ರಾಮದ ಸುಜಾತ ಚಿನ್ನಪ್ಪ ತಿಳಿಸಿದರು.

ಗ್ರಾಮದ ಚಂದ್ರಮ್ಮ, ಪುಷ್ಪ ಸೋಮಶೇಖರ್, ಉಮಾ ಪರಶುರಾಮ್, ರಾಧಾ ನಾಗರಾಜರೆಡ್ಡಿ, ಸುನಂದಮ್ಮ, ಜಯಲಕ್ಷ್ಮಮ್ಮ, ಸಂಪ್ರಿತ, ಶಶಿಕಲಾ, ಚಂದ್ರಿಕ, ಮೇಜರ್ ರಘುರಾಮರೆಡ್ಡಿ, ಅಶೋಕ್ ಕುಮಾರ್, ಹರೀಶ್, ಬಸವರಾಜು, ರಾಹುಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-15-856474494

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.