ಭಾನುವಾರ, ಸೆಪ್ಟೆಂಬರ್ 22, 2019
23 °C

18ರಿಂದ ಸಾವನದುರ್ಗ ಜಾತ್ರೆ

Published:
Updated:

ಸಾವನದುರ್ಗ(ಮಾಗಡಿ): ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವ ಮೇ 16ರಿಂದ 20 ರವರೆಗೆ ನಡೆಯಲಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್‌.ನಾಗರಾಜು ತಿಳಿಸಿದರು.

16ರಂದು ಬೆಳಿಗ್ಗೆ ಅಂಕುರಾರ್ಪಣೆ, ಯಾಗಶಾಲೆ ಪ್ರವೇಶ, 17ರಂದು ನರಸಿಂಹ ಜಯಂತಿ, 18ರಂದು ಮಧ್ಯಾಹ್ನ 1.45ಕ್ಕೆ ಬ್ರಹ್ಮರಥೋತ್ಸವ ನಡೆಯಲಿದೆ. 19ರಂದು ಸೂರ್ಯಮಂಡಲೋತ್ಸವ, 20ರಂದು ಚೂರ್ಣಾಭಿಷೇಕ ನಡೆಯಲಿದೆ ಎಂದರು.

ಅರವಟಿಗೆ: ಲಕ್ಷ್ಮೀನರಸಿಂಹಸ್ವಾಮಿ ಸೇವಾ ಸಮಿತಿ ವತಿಯಿಂದ ಬ್ರಹ್ಮರಥೋತ್ಸವದ ಅಂಗವಾಗಿ 18ರಂದು, 18ನೇ ವರ್ಷದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ವಸಂತಯ್ಯ ತಿಳಿಸಿದರು.

ವಾಹನ ನಿಲುಗಡೆ: ಸಾವನದುರ್ಗದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವಕ್ಕೆ ಬರುವ ಭಕ್ತರು ಕೆಂಪೇಗೌಡ ವನಧಾಮದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು. ರಸ್ತೆಯ ಮಧ್ಯ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಬ್‌ ಇನ್‌ಸ್ಪೆಕ್ಟರ್‌ ಬಿ.ನಟರಾಜು ಹೇಳಿದರು.

ವೀರಭದ್ರಸ್ವಾಮಿ ದೇವಾಲಯದಿಂದ ಮುಂದಕ್ಕೆ ವಾಹನಗಳನ್ನು ತರಬಾರದು. ಅರವಟಿಗೆ ನಡೆಸುವವರೂ ನಿಯಮವನ್ನು ಪಾಲಿಸಲೇಬೇಕು ಎಂದು ತಿಳಿಸಿದರು.

ನಾಯಕನ ಪಾಳ್ಯದ ಮೂಲಕ ಹಾದು ಬರುವ ಆಪೆ ಆಟೊದವರು ಕಲ್ಯಾಣ ಒಡೆಯರ ಮಠದ ಮುಂದೆ ವಾಹನ ನಿಲುಗಡೆ ಮಾಡಬೇಕು. ಸಂಚಾರಕ್ಕೆ ಅಡ್ಡಿ ಮಾಡಬಾರದು ಎಂದು ಮನವಿ ಮಾಡಿದರು.

Post Comments (+)