ಶುಕ್ರವಾರ, ಫೆಬ್ರವರಿ 28, 2020
19 °C

ಸ್ವಚ್ಛತೆ, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಆದ್ತೆಯ ನೀಡುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಹೇಳಿದರು.

ಇಲ್ಲಿನ ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಒಣ ಮತ್ತು ಹಸಿ ಕಸ ವಿಲೇವಾರಿಗೆ ಡಬ್ಬಗಳ ವಿತರಣೆ ಮತ್ತು ವಿಕಲ ಚೇತನರಿಗೆ ವಿವಿಧ ಪರಿಕರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಗ್ರಾಮಗಳಲ್ಲಿರುವ ವಾಸದ ಮನೆಯ ಸುತ್ತಮುತ್ತ ಕಸಹಾಕದೆ ಹಸನು ಮಾಡಿ ಗಿಡ ಮರ, ಸೊಪ್ಪು ತರಕಾರಿಗಳನ್ನು ಬೆಳೆಸಿದರೆ ತಾಜಾ ತರಕಾರಿ ಉಪಯೋಗಿಸಿಕೊಳ್ಳಬಹುದು. ಗಿಡ ಮರಗಳಿಂದ ಪರಿಸರ ಸಂರಕ್ಷಣೆ ಆಗಲಿದೆ. ದಿನನಿತ್ಯ ಬಳಕೆ ಮಾಡುವ ವ್ಯರ್ಥ ನೀರನ್ನೆ ಉಪಯೋಗಿಸಿದರೆ ಸಾಕು’ ಎಂದು ಹೇಳಿದರು.

‘ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನ ಮತ್ತು ಕ್ರೋಡೀಕರಣಗೊಂಡ ಅನುದಾನದಲ್ಲಿ ಶೇ 5ರಷ್ಟು ಕಡ್ಡಾಯವಾಗಿ ಅಂಗವಿಕಲರಿಗೆ ಬಳಕೆಯಾಗಲೇಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಟ್ಟ ಅನುದಾನಗಳು ಸದ್ಬಳಕೆಯಾಗಬೇಕು’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಮಾತನಾಡಿ, ‘ಸ್ವಚ್ಛತೆ ಬರೀ ನಗರಗಳಿಗೆ ಅನ್ವಯಿಸಬಾರದು. ಮಾರಕರೋಗಗಳು ಎಲ್ಲಿ ಬೇಕಾದರೂ ಆರಂಭವಾಗಬಹುದು. ನಮ್ಮ ಮನೆಯ ಸುತ್ತ ಮತ್ತು ಜಾಗ ಮತ್ತು ನೀರು ಹರಿಯು ಚರಂಡಿಗಳನ್ನು ನಾವೇ ಸ್ವಚ್ಛ ಮಾಡುವುದರಲ್ಲಿ ತಪ್ಪೇನಿದೆ? ಬರಿ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನೆ ಅವಲಂಬಿಸಬಾರದು’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷೆ ಪಿಳ್ಳಮ್ಮ, ಸದಸ್ಯರಾದ ರೇಖಾ, ಕದಿರಪ್ಪ, ಮುನೇಗೌಡ, ಪಿ.ಹನುಮಂತೇಗೌಡ ,ಲಕ್ಷಣ್, ರಂಗಸ್ವಾಮಿ, ಲಕ್ಷ್ಮಮ್ಮ ,ಗೌರಮ್ಮ ,ನಾಗವೇಣಿ, ಆನಂದಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು