ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಕೆರೆ ಉಳಿಸಿ ಆಂದೋಲನ ಸಭೆ

Last Updated 9 ಅಕ್ಟೋಬರ್ 2022, 6:59 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಅರ್ಕಾವತಿ ನದಿ ಪಾತ್ರದ ಎಲ್ಲಾ ಜಲಮೂಲಗಳ ಉಳಿವಿಗಾಗಿ ನಾಗರಕೆರೆಯಿಂದ ಹೆಸರಘಟ್ಟ ಕೆರೆವರೆಗೆ ಪಾದಯಾತ್ರೆ, ನಮ್ಮೂರ ಕೆರೆ ಉಳಿಸಿ ಜನಾಂದೋಲನ ಕುರಿತು ಚರ್ಚಿಸಲು ವಿವಿಧ ಸಂಘಟನೆಗಳ ಸಭೆಯು ಚಿಕ್ಕತುಮಕೂರು ಗ್ರಾಮದ ಡೇರಿ ಆವರಣದಲ್ಲಿ ಅ. 9ರಂದು ಮಧ್ಯಾಹ್ನ3.30ಕ್ಕೆ ನಡೆಯಲಿದೆ.

ಸಭೆಯಲ್ಲಿ ಬರಹಗಾರ ಮಂಜುನಾಥ್ ಎಂ. ಅದ್ದೆ, ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ, ರಾಜ್ಯ ರೈತ ಸಂಘದ ಮುಖಂಡರಾದ ಕೆ. ಸುಲೋಚನಮ್ಮ ವೆಂಕಟರೆಡ್ಡಿ, ದಲಿತ ಮುಖಂಡ ರಾಜು ಸಣ್ಣಕ್ಕಿ, ಕನ್ನಡ ಪಕ್ಷದ ಮುಖಂಡ ಸಂಜೀವ್‌ ನಾಯಕ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಕೆರೆ ಹೋರಾಟ ಸಮಿತಿಯ ರಂಗರಾಜು, ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಅಧ್ಯಕ್ಷ ರವಿ ಮಾವಿನಕುಂಟೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕ ಅರವಿಂದ್, ಡಾ.ಎಚ್.ಜಿ. ವಿಜಯಕುಮಾರ್, ಕನ್ನಡಪರ ಹೋರಾಟಗಾರ ರಾಜಘಟ್ಟ ರವಿ, ಪ್ರಮೀಳಾ ಮಹಾದೇವ್‌ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT