ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಶಾಲೆಗೆ ಬೀಗ: ಬಿಇಒ

Last Updated 19 ಜೂನ್ 2019, 16:09 IST
ಅಕ್ಷರ ಗಾತ್ರ

ಆಲೂರು: ಕೆಂಚಮ್ಮ ವಿದ್ಯಾಸಂಸ್ಥೆ ನಡೆಸುವ ಶ್ರೀ ಕೆಂಚಾಂಬ ಕನ್ನಡ ಮಾಧ್ಯಮ ಶಾಲೆ 2019-2020ನೇ ಸಾಲಿಗೆ ಅಧಿಕೃತ ಮಾನ್ಯತೆ ಹೊಂದಿಲ್ಲ. ಈ ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ದಾಖಲು ಮಾಡಬಾರದು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೊನ್ನೇಶ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಕೆ.ಹೊಸಕೋಟೆ ಗ್ರಾಮದ ಕೆಂಚಾಂಬ ಶಾಲೆಗೆ ಪೊಲೀಸ್ ರಕ್ಷಣೆಯೊಂದಿಗೆ ಭೇಟಿ ನೀಡಿ, ಶಾಲೆಯ ಬಾಗಿಲನ್ನು ಮುಚ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಬಿಇಒ ಮಾತನಾಡಿದರು.

ಈ ಶಾಲೆಯಲ್ಲಿ 8, 9, 10ನೇ ತರಗತಿಯಿಂದ 46 ಮಕ್ಕಳು ಕಳೆದ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದವು. ಅವರನ್ನು ಇಲಾಖೆಯ ನಿಯಮದ ಪ್ರಕಾರ ಹತ್ತಿರದ ಸರ್ಕಾರಿ ಶಾಲೆಗೆ ದಾಖಲು ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಬಿಇಒ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾದ ಸಂಗಮೇಶ್, ಆಲೂರು ಪೊಲೀಸ್ ಠಾಣೆಯ ಎ.ಎಸ್.ಐ ವೆಂಕಟೇಶ್, ಕಾನ್‌ಸ್ಟೆಬಲ್‌ಗಳಾದ ರೇವಣ್ಣ, ಹೇಮಕಾಂತ್, ವಿಜಯಕುಮಾರ್ ಈ ಸಂದರ್ಭದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT